ಬರಗೂರು :
ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಚಿಕ್ಕಹುಲಿಕುಂಟೆ ಗ್ರಾಮದ ಯುವಕರು ಕ್ರಿಕೆಟ್ ಕ್ರೀಡಾಕೂಟ ಏರ್ಪಡಿಸಿ ವಿಶೇಷವಾಗಿ ನಗದು ಹಣ, ಟ್ರೋಫಿಯ ಜೊತೆಗೆ ಟಗರು ಬಹುಮಾನ ಆಯೋಜಿಸಿ ಕ್ರೀಡಾಪಟುಗಳನ್ನು ಉತ್ತೇಜಿಸುವ ಕಾರ್ಯ ಮೆಚ್ಚುವಂತದ್ದು ಎಂದು ಬೆಂಗಳೂರು ಬೆಸ್ಕಾಂ ಇಲಾಖೆಯ ಚೀಫ್ ಎಂಜಿನಿಯರ್ ರಾಮೇಗೌಡ ಹೇಳಿದರು.
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಚಿಕ್ಕಹುಲಿಕುಂಟೆ ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಧೀರೋದ್ಧಾರ ವಿನಾಯಕ ಗೆಳೆಯರ ಬಳಗದ ವತಿಯಿಂದ ಕೆಂಪೇಗೌಡ ಕಪ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಬ್ಯಾಟ್ ಬೀಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2020 ರಿಂದ 8 ತಿಂಗಳಿನಿಂದಲೂ ಕೊರೋನಾದಿಂದ ಯುವಕರು ಕ್ರೀಡೆಗಳಲ್ಲಿ ಭಾಗವಹಿಸದೆ ನಿರಾಸಕ್ತಿ ಹೊಂದಿದ್ದರು.
ಇತ್ತೀಚೆಗೆ ಕೊರೊನಾ ಸೋಂಕು ಕಡಿಮೆಯಾಗುತ್ತಿರುವುದನ್ನು ಪರಿಗಣಿಸಿದ ಇಲ್ಲಿನ ಗ್ರಾಮದ ಯುವಕರು ತಾಲ್ಲೂಕಿನಾದ್ಯಂತ ಇರುವಂತಹ ಕ್ರಿಕೆಟ್ ತಂಡಗಳಿಗೆ ಆಹ್ವಾನ ನೀಡಿ ಕ್ರೀಡಾಪಟುಗಳ ಮನರಂಜಿಸುತ್ತಿರುವ ಕಾರ್ಯ ಶ್ಲಾಘನೀಯ. ಮುಂದೆಯೂ ಸಹ ಯುವಕರ ಸಾಮಾಜಿಕ ಸೇವಾ ಕಳಕಳಿಯುಳ್ಳ ಕಾರ್ಯಗಳ ಪ್ರೋತ್ಸಾಹಕ್ಕೆ ಜೊತೆಗಿರುತ್ತೇನೆ ಎಂದರು.
ದೊಡ್ಡಹುಲಿಕುಂಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜಶೇಖರ್, ಎಚ್.ಎಂ.ಲಕ್ಷ್ಮಣ, ರವಿಕುಮಾರ್‍ಗೌಡ, ಯುವ ಮುಖಂಡ ಅರುಣ, ವಕೀಲ ಕುಮಾರ್, ರಂಗನಾಥ್, ಶೇಖರ್, ಕೆಂಪೇಗೌಡ ಧೀರೋದ್ಧಾರ ಯುವಕರ ಬಳಗದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ