ಬೆಂಗಳೂರು : ಮದ್ಯಪ್ರಿಯರಿಗೆ ಮತ್ತೊಮ್ಮೆ ಷಾಕ್‌ ….!

ಬೆಂಗಳೂರು :

   ಮದ್ಯ ಪ್ರಿಯರಿಗೆ  ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ ರಾಜ್ಯದಲ್ಲಿ  ಬಿಯರ್ ದರ ದುಬಾರಿಯಾಗಲಿದೆ. ಕಳೆದ ತಿಂಗಳು 29 ತಾರೀಕಿನಿಂದ ಪ್ರೀಮಿಯಂ, ಸೆಮಿ ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಬಿಯರ್‌ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದ್ದು ಶೀಘ್ರದಲ್ಲೇ ಹೊಸ ದರಗಳು ಅನ್ವಯವಾಗಲಿವೆ. ಕಳೆದ ಜನವರಿ ತಿಂಗಳಲ್ಲಿ ಬಿಯರ್ ದರ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಬಿಯರ್ ಬಾಟಲ್ ಮೇಲೆ 10 ರಿಂದ 12 ರೂ  ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ.ಈಗಾಗಲೇ ಸರ್ಕಾರಕ್ಕೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಅಸ್ತು ಅಂದ್ರೆ ಅಕ್ಟೋಬರ್ 1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

   ಬಿಯರ್‌ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಆ.23 ರಂದೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಿ 15 ದಿನ ಕಾಲಾವಕಾಶ ನೀಡಿತ್ತು. ಆದ್ದರಿಂದ ಶೀಘ್ರದಲ್ಲೇ ಬೆಲೆ ಹೆಚ್ಚಳಕ್ಕೆ ಸರ್ಕಾರ ಅಸ್ತು ಎನ್ನಲಿದ್ದು, ಬಾಟಲ್‌ ಬಿಯರ್‌ 10 ರು.ಗಿಂತಲೂ ಅಧಿಕ ದುಬಾರಿಯಾಗಲಿದೆ.

   ಇದರಿಂದಾಗಿ ಕಳೆದ ಒಂದೂವರೆ ವರ್ಷದಲ್ಲೇ ಮೂರು ಬಾರಿ ದರ ಹೆಚ್ಚಳದ ಶಾಕ್‌ ಅನ್ನು ಬಿಯರ್‌ ಪ್ರಿಯರು ಅನುಭವಿಸುವಂತಾಗಿದೆ. ಸಧ್ಯ ಮಾರುಕಟ್ಟೆಯಲ್ಲಿ ಒಂದು ಸ್ಲ್ಯಾಬ್‌ನಲ್ಲಿ ಮಾತ್ರ ಬಿಯರ್‌ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅದನ್ನು ಆಲ್ಕೋಹಾಲ್‌ ಪ್ರಮಾಣಕ್ಕನುಗುಣವಾಗಿ ಮೂರು ಸ್ಲ್ಯಾಬ್‌ ಮಾಡಿ ಪ್ರತಿ ಸ್ಲ್ಯಾಬ್‌ನ ದರವನ್ನೂ ಹೆಚ್ಚಳ ಮಾಡಲಾಗುತ್ತದೆ. ಶೇ.5 ರವರೆಗೂ ಆಲ್ಕೋಹಾಲ್‌ ಅಂಶ ಇರುವ ಬಿಯರ್‌, ಶೇ.5 ರಿಂದ 6.5 ಹಾಗೂ ಶೇ.6.5 ರಿಂದ 8 ರವರೆಗೂ ಆಲ್ಕೋಹಾಲ್‌ ಇರುವ ಮೂರು ಸ್ಲ್ಯಾಬ್‌ಗಳನ್ನು ವಿಂಗಡಿಸಿ ದರ ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ ಮದ್ಯ‌ಮಾರಾಟದಿಂದ ರಾಜ್ಯಕ್ಕೆ 65-70 ಕೋಟಿ ಆದಾಯ ಬರುತ್ತಿದೆ. ಮದ್ಯಮಾರಾಟದಿಂದ ಇನ್ನಷ್ಟು ಆದಾಯ ಗಳಿಕೆಗೆ ಸರ್ಕಾರ ಮುಂದಾಗಿದೆ. 

   ರಾಜ್ಯದಲ್ಲಿ 3,988 ವೈನ್ ಶಾಪ್(ಸಿಎಲ್2) ಗಳಿವೆ. 279 ಕ್ಲಬ್ ಅಂದ್ರೆ ಸಿಎಲ್ 4  ಇವೆ. 78 ಸ್ಟಾರ್ ಹೋಟೆಲ್ ಗಳಿವೆ. 2,382 ಹೋಟೆಲ್ ಮತ್ತು ವಸತಿ ಗೃಹಗಳಿವೆ. 68 ಮಿಲಿಟರಿ ಕ್ಯಾಂಟೀನ್ ಮಳಿಗೆ ಇದೆ. 3,634 ಬಾರ್ ಆ್ಯಂಡ್ ರೆಸ್ಟೋರೆಂಟ್ ಇದೆ. 1,041 ಎಂಎಸ್ಐಎಲ್ ಮತ್ತು 745 ಆರ್‌ಬಿಐ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ.

Recent Articles

spot_img

Related Stories

Share via
Copy link
Powered by Social Snap