ಡಿ.ಕೆ.ಶಿ. ಸಾಹೇಬರು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: Related image     ‘ಡಿ.ಕೆ. ಸಾಹೇಬರು ಅವರು ತಮ್ಮದೇ ರೀತಿಯಲ್ಲಿ ಬೆಳೆದುಬಂದ ನಾಯಕರು. ಅವರದೇ ಮಟ್ಟದ ರಾಜಕಾರಣ ಮಾಡುತ್ತಾರೆ, ಅದನ್ನು ಬಿಟ್ಟು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ.

      ಬೆಳಗಾವಿ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪದ ಬಗ್ಗೆ ಜಾರಕಿಹೊಳಿ ಸಹೋದರರು ದೂರು ನೀಡಿದ್ದಾರಲ್ಲ ಎಂಬ  ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಸಾಹೇಬರು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ. ಅವರು ತಮ್ಮದೇ ರೀತಿಯಲ್ಲಿ ಬೆಳೆದುಬಂದ ನಾಯಕರು. ಅವರದೇ ಮಟ್ಟದ ರಾಜಕಾರಣ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

      ಇನ್ನು ಸಂಪುಟ ವಿಸ್ತರಣೆಯಲ್ಲಿ ತಮಗೆ ಸಿಗಬೇಕಾದ ಸ್ಥಾನಮಾನದ ಕುರಿತು ಮಾತನಾಡಿದ ಅವರು,  ಪಕ್ಷ ತಮಗೆ ಉತ್ತಮ ಸ್ಥಾನ, ಅವಕಾಶಗಳನ್ನು ನೀಡಿದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಮಂತ್ರಿಗಿರಿ ಹಣೆಯಲ್ಲಿ ಬರೆದಿರಬೇಕು. ನಾನು ಮಂತ್ರಿಗಿರಿ ಪಡೆದುಕೊಳ್ಳುವುದಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link