ಬೆಂಗಳೂರು:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ್ ಪುತ್ರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನ. 18ರಂದು ಪವಿತ್ರ ಪ್ಯಾರಡೈಸ್ ಬಳಿ ಮಾತನಾಡಲೆಂದು ಸಾ.ರಾ.ಗೋವಿಂದು ರವರ ಕಾರಿನ ಚಾಲಕ ಹರೀಶ್ ನನ್ನು ಕರೆಸಿ ನಟ ಅನೂಪ್, ಆತನ ಸ್ನೇಹಿತರು ಹಲ್ಲೆ ನಡೆಸಿದ್ದರು. ನಂತರ ಇಂಡಿಕಾ ಕಾರಿನಿಂದ ಇಳಿಸಿ ಹರೀಶ್‌ನನ್ನು ಥಳಿಸಿ ಅನೂಪ್ ಸ್ನೇಹಿತರು ಕಾರನ್ನು ತೆಗೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿದೆ. ತಡವಾಗಿ ಬೆಳಕಿಗೆ ಬಂದಿದೆ.
ಅನೂಪ್ ‘ಡವ್’ ಎಂಬ ಚಲನಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ನಟನಾಗಿ ಗುರುತಿಸಿಕೊಂಡಿದ್ದಾರೆ.
ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 323, 342, 384, 341ರಡಿ ಪ್ರಕರಣ ದಾಖಲಾಗಿದ್ದು, ಅನೂಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ