ಹಗರಿಬೊಮ್ಮನಹಳ್ಳಿ
ದೇಶದ ಮೇಲೆ ಉಗ್ರರ ದಾಳಿಗಳು ನಡೆಯುತ್ತಲೇ ಇವೆ. ಅವುಗಳನ್ನು ನಿಯಂತ್ರಿಸುವಲ್ಲಿ ದೇಶವನ್ನಾಳಿದ ಕೇಂದ್ರ ಸರ್ಕಾರಗಳು ಯಶಸ್ವಿಕೂಡ ಆಗಿವೆ. ಆದರೆ, ಈ ಬಾರಿ ಇದೇ ಪ್ರಯತ್ನವನ್ನು ರಾಜಕಾರಣಕ್ಕೆ ಬಣ್ಣ ಬಳಿಯುತ್ತಿದ್ದಾರೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ತಾಲೂಕಿನ ಬಾಚಿಗೊಂಡನಹಳ್ಳಿ ಒಂದನೇ ಕಾಲೂನಿಯ ಬಳಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ನಿರ್ಮಿಸಲಾಗಿರುವ 66/11ಕೆ.ವಿ.ವಿದ್ಯುತ್ ವಿತರಣೆ ಕೇಂದ್ರದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1947ರಿಂದಲೇ ಪಾಕಿಸ್ತಾನಕ್ಕೂ ನಮ್ಮ ದೇಶದ ನಡುವೆ ಬಲವಾದ ವಿರೋಧಗಳು ಇವೆ.
ಇಂದಿರಾಗಾಂಧಿಯವರು 1971-72ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟಕ್ಕೆ ಇಳಿದಾಗ ಅಟಲ್‍ಬಿಯಾರಿ ವಾಜಪೇಯಿ ಇಂದಿರಾಗಾಂಧಿಯವರನ್ನು ದುರ್ಗಿ ಎಂದಿದ್ದು ಉದಾಹರಣೆ ಇದೆ. ನಮ್ಮ ದೇಶದ ವಿರುದ್ಧ ಯಾರೇ ಸಿಡಿದರು ಅದಕ್ಕೆ ಪ್ರತ್ತುತ್ತರ ನೀಡುವುದು ನಮ್ಮ ವಾಡಿಕೆ, ಆದರೆ ಅದನ್ನೇ ರಾಜಕಾರಣವಾಗಿ ಬಳಸಿಕೊಳ್ಳಬಾರದು.
ಅದರಂತೆ ಅವಕಾಶ ಸಿಕ್ಕರೆ ಅಧಿಕಾರ ದಾಹಕ್ಕಾಗಿ ತುದಿಗಾಲಲ್ಲಿ ನಿಂತಿರುವ ಯಡಿಯೂರಪ್ಪನಂತವರಿಂದ ರಾಜಕಾರಣ ಕಲುಷಿತ ಗೊಳ್ಳುತ್ತಿದೆ ಎಂದು ಕಟುವಾಗಿ ಠೀಕಿಸಿದರು. ಅದೇ ಈ ಗ್ರಾಮದ ಮಾಜಿ ಶಾಸಕ ಚನ್ನಬಸವನಗೌಡ್ರು, ರಾಜ್ಯದ ಗೃಹ ಸಚಿವರಾಗಿದ್ದ ಎಂ.ಬಿ.ರಾಮರಾಯರು ರಾಜಕಾರಣಕ್ಕೊಂದು ಆದರ್ಶ ವ್ಯಕ್ತಿಗಳಾಗಿ ನಿಲ್ಲುತ್ತಾರೆ ಎಂದರು. ಕೇಂದ್ರದಲ್ಲಿ 5ವರ್ಷಗಳಿಂದ ಏನು ಮಾಡದೆ ಮತೀಯ ಬಾವನೆಗಳನ್ನು ಹೊಂದಿದ ಬಿಜೆಪಿ ಕ್ಷುಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಎಸ್.ಭೀಮಾನಾಯ್ಕ ಅಧ್ಯಕ್ಷತೆವಹಿಸಿ, ಕ್ಷೇತ್ರವನ್ನು ಆಡಳಿತ ನಡೆಸಿದ ಎಲ್ಲಾ ಶಾಸಕರು ನೀರಾವರಿಗೆ ಒತ್ತು ನೀಡದೆ, ಯೋಜನೆಗಳನ್ನು ಜಪಿಸುತ್ತಲೇ, ಕಾಲ ಹರಣ ಮಾಡಿದ್ದಾರೆ ಎಂದು ಆಡಳಿತ ನಡೆಸಿದ ಎಲ್ಲಾ ಶಾಸಕರ ವಿರುದ್ಧ ಆರೋಪಿಸಿದ ಅವರು, ನಾನು ಕ್ಷೇತ್ರವನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡುವ ಹಿನ್ನೆಲೆಯಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ, ಚಿಲವಾರು ಬಂಡಿ ಏತ ನೀರಾವರಿ, ಮಾಲವಿ ಜಲಾಶಯ ಕಾಮಗಾರಿಗಳ ಜೊತೆಯಲ್ಲಿ 12ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಕೂಡ ಕೈಗೆತ್ತಿಕ್ಕೊಳ್ಳಾಗುವುದು ಎಂದು ತಿಳಿಸಿದರು.
ಅದರಂತೆ ಬಾಚಿಗೊಂಡನಹಳ್ಳಿ ಏರಿಯಾ ಒಂದರಲ್ಲಿಯೇ ಸಮುದಾಯ ಭವನ, ಸಿಸಿ ರಸ್ತೆಗಳು, ಪಶುಆಸ್ಪತ್ರೆ, ವಿದ್ಯುತ್ ವಿತರಣಾ ಉಪಕೇಂದ್ರ ಸೇರಿದಂತೆ ಅನೇಕ ಜನಪರ ಯೋನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ ಈ ಭಾಗದಲ್ಲಿ ನಮಗೆ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ, ನಾನೇನು ಕಡಿಮೆ ಮಾಡಿದ್ದೇನೆ ಹೇಳಿ ಎಂದು ಸಾರ್ವಜನಿಕರತ್ತ ಪ್ರಶ್ನೆ ಎಸೆದರು. ರೈತರ ಪಂಪ್‍ಸೆಟ್‍ಗಳಿಗೆ 7ಗಂಟೆ ವಿದ್ಯುತ್ ವಿತರಣೆಯಾಗುತ್ತಿದ್ದು ನಿಮ್ಮ ಬೇಡಿಕೆಯಂತೆ ನಿರಂತರ 7ಗಂಟೆಗಳ ಕಾಲ ವಿದ್ಯುತ್ ವಿತರಣೆಮಾಡುವಂತೆ ಇಂದಿನಿಂದ ನಾವು ಅಧಿಕಾರಿಗಳಿಗೆ ಆದೇಶ ನೀಡಲಾಗುವುದೆಂದು ಭರಸವೆ ನೀಡಿದರು.
ಅಭಿವೃದ್ಧಿ ವಿಚಾರದಲ್ಲಿ ತಾಲೂಕನ್ನು ಭೌಗೋಲಿಕ ದೃಷ್ಠಿಯಿಂದ ಜಿಲ್ಲೆಯನ್ನಾಗಿ ಮಾಡುವಲ್ಲಿ ಹೋರಾಟಕ ಕೈಗೊಳ್ಳಬೇಕಾಗಿದೆ, ಇದಕ್ಕಾಗಿ ಸಮಿತಿ ರಸಚಿಸಲಾಗುವುದೆಂದರು. ನಂತರ ಮುಂದುವರೆದು ದೇಶ ರಕ್ಷಣೆಯಲ್ಲಿ ನಮ್ಮ ಸೈನಿಕರು ತಮ್ಮ ಪ್ರಬಲವನ್ನು ತೋರಿಸಿದ್ದಾರೆ. ಆದರೆ, ಅದೇ ಬಿಜೆಪಿಯವರು ವಿಜಯೋತ್ಸವದಲ್ಲಿ ಭಾರತದ ಧ್ವಜವನ್ನಿಡಿದು ಸಂಭ್ರಮಿಸುವುದು ಬಿಟ್ಟು ತಮ್ಮ ಬಿಜೆಪಿ ಬಾವುಟಗಳನ್ನು ಕಟ್ಟಿಕೊಂಡು ಆಚರಿಸಿವೆ. ತಿಳುವಳಿಕೆ ಇಲ್ಲದ ಮತಿಗೇಡಿಗಳು ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ ಎಂದು ಟೀಕಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಯಾದ ಜೆ.ಎಂ.ವೀರಸಂಗಯ್ಯ ಮಾತನಾಡಿ, ಹಡಗಲಿ ತಾಲೂಕಿನಲ್ಲಿ 29ಸಾವಿರ ಹಾಗೂ ಈ ತಾಲೂಕಿನಲ್ಲಿ 28ಸಾವಿರ ಎಕರೆ ರೈತರ ಕೃಷಿಭೂಮಿಯಲ್ಲಿ ಬೆಳೆದು ನಿಂತ ಮೆಕ್ಕೆ ಜೋಳಕ್ಕೆ ಸೈನಿಕ ಹುಳುಬಾದೆಯಿಂದ ಕನಿಷ್ಟ 1700ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ 2ಕೃಷಿ ವಿಜ್ಞಾನ ಕೇಂದ್ರಗಳ ಅವಶ್ಯವಿದ್ದು, ಹಗರಿಬೊಮ್ಮನಹಳ್ಳಿಯಲ್ಲಿ ಒಂದು ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾಗಬೇಕು ಎಂದು ಸಂಸದರನ್ನು ಮತ್ತು ಶಾಸಕರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ತಾ.ಪಂ.ಅಧ್ಯಕ್ಷೆ ನಾಗಮ್ಮ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಿದೇವಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುವಲಿ, ಸದಸ್ಯರಾದ ಜೋಗಿ ಹನುಮಂತು, ಹುದೇದ್ ಗುರುಬಸವರಾಜ್, ಹನುಮಂತಪ್ಪ, ಡಿಶ್ ಮಂಜುನಾಥ, ಬಾಬು, ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಗೌಡ್ರು, ಹಾಲು ಒಕ್ಕೂಟದ ಕೊಟ್ರಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದನಗೌಡ, ಕೆಪಿಟಿಸಿಎಲ್‍ನ ಎಇಇ ಖಲಾಂಧರ್, ಜೆಸ್ಕಾಂ ಬಳ್ಳಾರಿ ಇಇ ಸತೀಶ್, ತಾಲೂಕು ಇಇ ತೇಜಾನಾಯ್ಕ, ಎಇಇ ಪ್ರಕಾಶನಾಯ್ಕ, ಜೆಇ ಪ್ರೇಮ್‍ಕುಮಾರ್ ಮತ್ತಿತರರು ಇದ್ದರು. ಬಾಚಿಗೊಂಡನಹಳ್ಳಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೆಪಿಟಿಸಿಎಲ್ ಎಸ್.ಇ ಪ್ರಹ್ಲಾದ್ ಸ್ವಾಗತಿಸಿ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
