ಗುಬ್ಬಿ:
ತಾಲ್ಲೂಕಿನ ನಾಗಸಂದ್ರ (ಕೆ.ಜಿ.ಟೆಂಪಲ್)ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡೆಗಳಲ್ಲಿ ಅಪ್ರಿನ್ ಖಾನಂ ಉದ್ದಜಿಗಿತದಲ್ಲಿ ಪ್ರಥಮ, ತ್ರಿವಿಧ ನೆಗೆತದಲ್ಲಿ ತೃತೀಯ, ಲೇಪಾಕ್ಷಿ ಎತ್ತರ ಜಿಗಿತದಲ್ಲಿ ಪ್ರಥಮ, 1500 ಮೀ.ಓಟದಲ್ಲಿ ತೃತೀಯ, ಸ್ಥಾನ ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಬಿ.ಎಸ್.ತೇಜಸ್ವಿನಿ 100 ಮೀ.ಓಟದಲ್ಲಿ ಪ್ರಥಮ, ಆಯಿಷಾ ತಬಸಮ್ ನಡಿಗೆಯಲ್ಲಿ, ಮುಜಾಹಿದ್ದೀನ್, ವರುಣ, ಹರ್ಷವರ್ಧ, ಫರ್ಹಾನ್ ಹುಸೇನ್ ಥ್ರೋಬಾಲ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ವಾಲಿಬಾಲ್‍ನಲ್ಲಿ ಕಾವ್ಯ, ಎನ್.ಜ್ಯೋತಿ, ಡಿ.ಜಿ.ಚೈತ್ರ, ಎನ್.ವಿ.ಶಾಲಿನಿ, ಬಿ.ಶ್ವೇತ, ರತ್ನಮ್ಮ, ಎಂ.ಜಿ.ಪೂರ್ಣಿಮಾ ಪ್ರಥಮ ಸಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಇವರುಗಳಿಗೆ ಪ್ರಾಚಾರ್ಯರಾದ ಪಿ.ರಮೇಶ್ ಮತ್ತು ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಅಭಿನಂದಿಸಿದ್ದಾರೆ.
