ಮುಂಬೈ:
ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ವಿಪಕ್ಷಗಳ ಸಭೆಯಲ್ಲಿ ತಮ್ಮ ನಾಯಕರಿಗೆ ಆಹ್ವಾನ ನೀಡದ 26 ಸಮಾನ ಮನಸ್ಕ ಪಕ್ಷಗಳ ವಿರುದ್ಧ ಕಿಡಿಕಾರಿರುವ ಎಐಎಂಐಎಂ, ನಾವು ಅವರಿಗೆ ರಾಜಕೀಯ ಅಸ್ಪೃಶ್ಯರು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಕ್ಷದ ನಾಯಕ ಹಾಗೂ ವಕ್ತಾರ ವಾರಿಸ್ ಪಠಾಣ್, ಜಾತ್ಯತೀತ ಪಕ್ಷಗಳು ಎಂದು ಕರೆದುಕೊಳ್ಳುತ್ತಿರುವವರು ತಮ್ಮನ್ನು “ರಾಜಕೀಯ ಅಸ್ಪೃಶ್ಯರು” ಎಂದು ಪರಿಗಣಿಸುತ್ತಿವೆ. ಅಸಾದುದ್ದೀನ್ ಓವೈಸಿ ಅವರ ಪಕ್ಷವನ್ನು ಯಾರಾದರೂ ಹೇಗೆ ನಿರ್ಲಕ್ಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ.