ಸದ್ಯಕ್ಕಿಲ್ಲ ನೈಸ್ ರೋಡ್ ಟೋಲ್ ದರ ಏರಿಕೆ;
ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆ ವಿಚಾರ ಹೊಸದೇನು ಅಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿ, ಜೀವನವೇ ದುಬಾರಿ ಆಗಿ ಹೋಗಿದೆ.
ಪೆಟ್ರೋಲ್, ಡಿಸೇಲ್ ಹೆಚ್ಚಳ ಬಳಿಕ ಟೋಲ್ಗಳ ದರ ಕೂಡ ಹೆಚ್ಚಾಗಿತ್ತು. ನೈಸ್ ರಸ್ತೆ ಟೋಲ್ ಹೆಚ್ಚಳ ಮಾಡಿದ್ದ ಸಂಸ್ಥೆ ಜುಲೈ 1 ರಿಂದ ಶುಲ್ಕ ಹೆಚ್ಚಳ ಮಾಡುವುದಾಗಿ ನೈಸ್ ಟೋಲ್ ಕಂಪನಿ ಹೇಳಿತ್ತು. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ ಹೆಚ್ಚಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಇದೀಗ ಶುಲ್ಕ ಏರಿಕೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಸ್ಥೆಯು ದರ ಏರಿಕೆಯನ್ನು ಮುಂದೂಡಿದ್ದರಿಂದ ಪ್ರಯಾಣಿಕರಿಗೆ ರಿಲೀಫ್ ಸಿಕ್ಕಿದೆ.
![](https://prajapragathi.com/wp-content/uploads/2022/06/download-3-1.jpg)