ಪರಿಶೀಲನೆ ವೇಳೆ ಆಡಿಟೋರಿಯಂನಿಂದ ಬಿದ್ದ ಗುಪ್ತಚರ ಇಲಾಖೆ ಅಧಿಕಾರಿ ಸಾವು: ಸಿಸಿಟಿವಿ ದೃಶ್ಯ

ಹೈದರಾಬಾದ್​ (ತೆಲಂಗಾಣ):

ಉಪ ರಾಷ್ಟ್ರಪತಿಅಧಿಕಾರಿ ಸಾವು: ವೆಂಕಯ್ಯ ನಾಯ್ಡು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದ ಭದ್ರತಾ ಪರಿಶೀಲನೆ ವೇಳೆ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಕೆಳಗಡೆ ಬಿದ್ದು ಮೃತಪಟ್ಟಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್​​ನಲ್ಲಿ ನಡೆದಿದೆ. 51 ವರ್ಷದ ಕುಮಾರ್.ಎ ಎಂಬುವರೇ ಮೃತ ಅಧಿಕಾರಿ.

ಇಲ್ಲಿನ ಆಡಿಟೋರಿಯಂವೊಂದರಲ್ಲಿ ಮೇ 20ರಂದು ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾಜ್ಯ ಪೊಲೀಸ್​ ಇಲಾಖೆಯ ಗುಪ್ತಚರ ಭದ್ರತಾ ಘಟಕದ ಅಧಿಕಾರಿಗಳ ತಂಡ ಕಾರ್ಯಕ್ರಮದ ಭದ್ರತೆ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಯಾದ ಕುಮಾರ್​ ಸಹ ಆಡಿಟೋರಿಯಂನ ಫೋಟೋಗಳನ್ನು ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿಂದ ಕಾಲು ಜಾರಿ ಅವರು ಕೆಳಗಡೆ ಬಿದ್ದಿದ್ದಾರೆ.

ಮೃತ ಕುಮಾರ್​ ಮೂಲತಃ ಬಿಹಾರ ಮೂಲದವರಾಗಿದ್ದು, ಇವರ ಸಾವಿನ ಸುದ್ದಿ ತಿಳಿದು ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು​ ಕೇಸ್​ ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap