ಹೈದರಾಬಾದ್:
ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಿನ್ನೆ ರಾತ್ರಿ ಬಸ್ ವೊಂದಕ್ಕೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಹೊತ್ತಿ ಉರಿದಿದೆ. ಟಿಎಸ್ ಆರ್ ಟಿಸಿ ಬಸ್ ನಲ್ಲಿ ಈ ಅವಘಡ ಸಂಭವಿಸಿದ್ದು, ಬಸ್ ನಲ್ಲಿ ಸುಮಾರು 11 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬೆಂಕಿಯ ಜ್ವಾಲೆ ಇಡೀ ಬಸ್ ಗೆ ವ್ಯಾಪ್ತಿಸಿದ್ದು, ಸಂಪೂರ್ಣ ಸುಟ್ಟು ಕರಲಾಗಿದೆ. ಆದರೆ, ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಬಸ್ ನಲ್ಲಿ ಹೊಗೆ ಬಂದ ತಕ್ಷಣ ಅವರೆಲ್ಲಾ ಹೊರಗೆ ಬಂದಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ ಹೈದರಾಬಾದಿನ ಬಿಹೆಚ್ ಇಎಲ್ ನಿಂದ ವಿಜಯವಾಡ ಕಡೆಗೆ ತೆರಳುತಿತ್ತು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
