ಕುಶಾಲನಗರ:
ಪ್ರವಾಹದಿಂದ ಮನೆ ಕಳೆದುಕೊಂಡಿರುವ ಆರ್.ಟಿ.ಸಿ(ಪಹಣಿ) ಹೊಂದಿರುವ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಮೂಲಕ ಹೊಸದಾಗಿ ಮನೆ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಹಾಗೂ ನರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.
ಇಂದು ಪಟ್ಟಣದ ಜನವಸತಿ ಪ್ರದೇಶಕ್ಕೆ ಗುರುವಾರ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ನೆರೆ ಪ್ರವಾಹಕ್ಕೆ ಸಿಲುಕಿರುವ ಪರಿಸ್ಥಿತಿ ಅವಲೋಕಿಸಿದರು.
ನಿಮ್ಮ ಕಷ್ಟಗಳಿಗೆ ನಾವಿದ್ದೇವೆ. ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ನದಿ ಅಂಚಿನಲ್ಲಿರುವ ನಿವಾಸಿಗಳು ಸರ್ಕಾರ ಪುನಾರ್ವಸತಿ ಕಲ್ಪಿಸುವ ಸ್ಥಳಗಳಿಗೆ ತೆರಳುವ ಮೂಲಕ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾವೇರಿ ನದಿ ಅಂಚಿನಲ್ಲಿರುವ ದಂಡಿನಪೇಟೆ ಬಡಾವಣೆ, ಅಯ್ಯಪ್ಪ ಸ್ವಾಮಿ ರಸ್ತೆಗಳಿಗೆ ಭೇಟಿ ನೀಡಿದ ಸಚಿವ ಖಾದರ್ ಅವರು ನೆರೆ ಪ್ರವಾಹದಿಂದ ಧರೆಗೆ ಉರುಳಿರುವ ಮನೆಗಳನ್ನು ಖುದ್ದು ವೀಕ್ಷಿಸಿದರು. ಮನೆ ಕಳೆದುಕೊಂಡ ನಿವಾಸಿಗಳಿಗೆ ಧೈರ್ಯ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ