ಪೋತೀಸ್ : ದೀಪಾವಳಿ ಸಂಗ್ರಹಕ್ಕೆ ಚಾಲನೆ

0
53

ಬೆಂಗಳೂರು:

      ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪೋತಿಸ್ ಬಟ್ಟೆ ಮಳಿಗೆಯಲ್ಲಿ ಭಾನುವಾರ, ರೇಷ್ಮೆ, ಡಿಸೈನರ್, ಫ್ಯಾನ್ಸಿ ಸೀರೆಗಳ ನೂತನ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

      ಡ್ರೆಸ್ ಮೆಟೀರಿಯಲ್ ಗಳು, ಎಲ್ಲಾ ಬ್ರಾಂಡ್ ನ ಸಿದ್ಧ ಉಡುಪುಗಳು ಸೇರಿದಂತೆ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ಇಲ್ಲಿ ಭಿನ್ನ ಉಡುಪುಗಳು ಸಿಗಲಿವೆ. ದೀಪಾವಳಿ ಸಂದರ್ಭದಲ್ಲಿ ಬಟ್ಟೆಗಳನ್ನು ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಸಿಹಿ ಹಂಚಲಾಗುತ್ತದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. 

      ಪೊತೀಸ್ ನ ಗ್ರಾಹಕ ಸೇವಾ ವಿಭಾಗದ ನಿರ್ವಾಹಕಿ ಲಕ್ಷ್ಮೀ, ಗಾಂಧಿನಗರ ವಾರ್ಡ್ ನ ಕಾರ್ಪೋರೇಟರ್ ಲತಾಕುಮಾರ್  ರಾಥೋಡ್, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಸಂಸ್ಥೆಯ ಹಿರಿಯ ಪ್ರಧಾನ ನಿರ್ವಾಹಕ ಕೃಷ್ಣಕುಮಾರ್, ಮಾಧ್ಯಮ ನಿರ್ವಾಹಕ ವಿಜಯ್ ಪ್ರಕಾಶ್ ರವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

LEAVE A REPLY

Please enter your comment!
Please enter your name here