ಪೋಲಾಗುತ್ತಿರುವ ನೀರಿನ ಬಗ್ಗೆ ಅಸಡ್ಡೆ ತೋರುತ್ತಿರುವ ಅಧಿಕಾರಿಗಳ

ಹಾವೇರಿ :

        ನೀರಿಗಾಗಿ ಹಾಹಾಕಾರವಾಗುತ್ತಿರುವ ಈ ಬೇಸಿಗೆ ಕಾಲದಲ್ಲಿ ಇಲ್ಲಿನ ಬಸವೇಶ್ವರ ನಗರದ ಬಿ ಬ್ಲಾಕ್ 1 ನೇ ಕ್ರಾಸಿನ ಕೊನೆ ಭಾಗದ ವಾಸದೇವ ಮೇಲ್ಮರಿ ಅವರ ಮನೆಯ ಮುಂದೆ ನಿರಂತರವಾಗಿ ಸುಮಾರು 1 ತಿಂಗಳಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಕಿಂಚತ್ತು ಗಮನ ಹರಿಸದೇ ಇರುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೀರಿನ ಮಿತಬಳಕೆಯ ಮಾಡಬೇಕಾದ ಬೇಸಿಗೆ ಸಮಯದಲ್ಲಿ ನೀರು ಪೋಲಾಗುವುದನ್ನು ನಗರಸಭೆ ಅಧಿಕಾರಿಗಳು ಯಾವಾಗ ಸರಿ ಪಡಿಸುತ್ತಾರೋ ಕಾದು ನೋಡಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ