ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳದ್ದೇ ದರ್ಬಾರ್

ಅಕ್ರಮ ಕಟ್ಟಡಗಳ ಸರ್ವೆಯಲ್ಲಿ ಬ್ಯೂಸಿಯಾಗಿರುವ ಬಿಬಿಎಂಪಿ ಅಧಿಕಾರಿಗಳು

ಬಿಬಿಎಂಪಿ ಸರ್ವೆಯಲ್ಲಿ ಸತ್ಯ ಭಯಲು

ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ನಗರದಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆಯದೇ ಕಾನೂನು ಉಂಘಿಸಿ ನಿರ್ಮಿಸಿರುವ ಕಟ್ಟಡಗಳ ಬಗ್ಗೆ 8 ವರ್ಷಗಳಿಂದ ಬಿಬಿಎಂಪಿ ಸರ್ವೆ ಕಾರ್ಯವನ್ನು ನಡೆಸುತ್ತಲೇ ಇದ್ದು, ಸದಸ್ಯ ಶೇ50% ರಷ್ಟು ಕಟ್ಟಡಗಳನ್ನು ಸರ್ವೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.

ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಜಧಾನಿಯಲ್ಲಿ ಗಗನಚುಂಬಿ ಕಟ್ಟಿರುವ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಿಬಿಎಂಪಿ ಯಿಂದ ಅನುಮತಿ ಪಡೆಯದೇ ನಿಮಾಣ ಮಾಡಿರುವ ಕಟ್ಟಡಗಳ ಸಂಖ್ಯೇ ಹೆಚ್ಚಾಗಿದೆ ಎಂಬುದು ಸರ್ವೆಯಿಂದ ಬಯಲಾಗಿದೆ. ಪಾಲಿಕೆ ಬೆಳೆಯುತ್ತಿದಂತೆ ಅಕ್ರಮ ಕಟ್ಟಡಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಕಳೆದ 4 ವರ್ಷಗಳಿಂದ, ರಾಜಕಾರಣಿಗಳಿಗೆ ಹಾಗೂ ಪ್ರಭಾವಿಗಳಿಗೆ ಅಧಿಕಾರಿಗಳು ಮಣಿದು, ಕೋವಿಡ್ ಹಾಗೂ ಇತರೆ ಕಾರಣಗಳಿಂದ ಸರ್ವೆ ಮಾಡದೆ ಸಮಯ ವ್ಯರ್ಥ ಮಾಡಿದ್ದು ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ.

ಹೈಕೋರ್ಟ್ ಪ್ರಶ್ನೆಗಳಿಗೆ ಉತ್ತರವಿಲ್ಲ : ಬೆಂಗಳೂರು ಬೃಹತ್ ನಗರ ಪಾಲಿಕೆಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ನೂರಾರು ವರ್ಷಗಳು ಬೇಕಾ.? ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಅಕ್ರಮ ಕಟ್ಟಡಗಳಿವೆ, ಸರ್ವೆ ಕಾರ್ಯ ಎಲ್ಲಿಯವರೆಗೂ ಬಂದಿದೆ.? ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಗರದಲ್ಲಿ ಇಲ್ಲಿಯವರೆಗೂ ಎರಡು ಲಕ್ಷ ಅಕ್ರಮ ಕಟ್ಟಡಗಳಿದ್ದು ಅವುಗಳನ್ನು ಎರಡು ರೀತಿ ರ್ವಗೀಕರಣ ಮಾಡಲಾಗಿದೆ ಎಂಬುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.

2016 ರಿಂದ 2022ರ ವರೆಗಿನ ಸರ್ವೆ ಮಾಹಿತಿ : ಬಿಬಿಎಂಪಿ ವ್ಯಾಪ್ತಿಯಲ್ಲಿ 2016ರ ಜನವರಿ 1ರಿಂದ ಸರ್ವೆ ಕಾರ್ಯ ಆರಂಭಿಸಲಾಯಿತು. ನಕ್ಷೆ ಉಲ್ಲಂಘಿಸಿರುವ 36,759 ಕಟ್ಟಡಗಳನ್ನು ಗುರುತಿಸಲಾಗಿದ್ದು, ಅವುಗಳ ಪೈಕಿ 16,086 ಕಟ್ಟಡಗಳ ಸರ್ವೆ ಪೂರ್ಣಗೊಳಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಪಿ.ಎನ್.ರವೀಂದ್ರ ತಿಳಿಸಿದರು.

ಸರ್ವೆ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ : ನಗರದ ವ್ಯಾಪ್ತಿಯಲ್ಲಿ ಮಂಜೂರಾತಿಯನ್ನೇ ಪಡೆಯದೆ ಕಟ್ಟಡ ನಿರ್ಮಿಸಿರುವ 1,81,236 ಕಟ್ಟಡಗಳನ್ನು ಗುರುತಿಸಲಾಗಿದೆ. ಅವುಗಳ ಸರ್ವೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಮೊದಲ ಆದ್ಯತೆ. ಈ ಕಾರ್ಯವನ್ನು ಚುರುಕುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿಗಳಿಗೆ ತರಬೆತಿ ಕಾರ್ಯಗಾರ : ಪಾಲಿಕೆಯ ಅಧಿಕಾರಿಗಳು, ಎಲ್ಲಾ ವಲಯಗಳಲ್ಲಿಯೂ ಏಕರೂಪ ಪದ್ಧತಿಯನ್ನು ಜಾರಿಗೆ ತರುವ ಉದ್ದೇಶದಿಂದ ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರಿಗೆ, ಪಾಲಿಕೆಯ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕಾರ್ಯಗಾರವನ್ನು ಸಹ ನಡೆಸಿದ್ದಾರೆ. ಆಸ್ತಿ ತೆರಿಗೆ ಸಂಗ್ರಹಕ್ಕೆ ಮೊದಲ ಆದ್ಯತೆ, ಹೊಸ ಹೊಸ ಆಸ್ತಿಗಳ ಪತ್ತೆ, ಹಚ್ಚಿ ಆಸ್ತಿತೆರಿಗೆ ವ್ಯಾಪ್ತಿಗೆ ತರುವುದು, ತೆರಿಗೆ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳು, ವಿನಾಯಿತಿ, ತಂತ್ರಗಾರಿಕೆ, ಇ-ಆಸ್ತಿ ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು .

ಬೆಂಗಳೂರಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದೆ. ಇದನ್ನು ಎರಡು ರೀತಿ ವರ್ಗೀಕರಣ ಮಾಡಿರುವ ಬಿಬಿಎಂಪಿ ಅಕ್ರಮ ಕಟ್ಟಡಗಳು, ಪ್ಲಾನ್ ಡೀವಿಯೇಷನ್ (ಹೆಚ್ಚುವರಿ ಜಾಗ ಕಬಳಿಕೆಯ ಕಟ್ಟಡಗಳು)ಅಂತ ಗುರುತು ಮಾಡಿದೆ .1,81,236 ಅನಧಿಕೃತ ಕಟ್ಟಡ ಗುರುತಿಸಿರುವ ಬಿಬಿಎಂಪಿ , 36,759 ಪ್ಲಾನ್ ಡೀವಿಯೇಶನ್ ಕಟ್ಟಡಗಳ ಗುರುತು ಇವುಗಳ ಪೈಕಿ 16,086 ಬಿಬಿಎಂಪಿ ಸರ್ವೇ ಮಾಡಿದೆ, ಉಳಿದ 20,673 ಕಟ್ಟಡಗಳ ಸರ್ವೇ ಇದುವರೆಗೂ ಮಾಡಿಲ್ಲ. ಇನ್ನು ಈ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ರವರ ಪ್ರತಿಕ್ರಯೆ ಕೇಳಿದಾಗ ಸರ್ವೆ ಕಾರ್ಯ ಇನ್ನೂ ಅರ್ಧದಷ್ಟು ಆಗಬೇಕಿದೆ ಸರ್ವೆ ಕಾರ್ಯ ನಂತರ ಬಿಬಿಎಂಪಿ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ .

ರವೀಂದ್ರ , ಬಿಬಿಎಂಪಿ ವಿಶೇಷ ಆಯುಕ್ತ

ಪಬ್ಲಿಕ್ ಟಾಕ್ : ಬಿಬಿಎಂಪಿಯ ಅಧಿಕಾರಿಗಳು ತೆರೆಗೆ ಹಣವನ್ನು ಪೆÇೀಲಗದಂತೆ ತಡೆದು. ಹಣ ಸಂಗ್ರಹ ಮಾಡಿ ಬೆಂಗಳೂರಿನ ಮತ್ತಷ್ಟು ಅಭಿವೃದ್ಧಿಯನ್ನು ಮಾಡಬೇಕು ಅಅನ್ನುವ ನಿರ್ಧಾರ ಮಾಡಿದ್ದಾರೆ. ಆದರೆ ಈ ಕಾರ್ಯಾಗಾರ ಹಾಗೂ ಯೋಜನೆ ಯಶಸ್ವಿಯಾಗತ್ತ ಎಂಬುದನ್ನು ಕಾದು ನೋಡಬೇಕಿದೆ.

Recent Articles

spot_img

Related Stories

Share via
Copy link
Powered by Social Snap