ಬೆಂಗಳೂರು:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 38.3 ಡಿಗ್ರಿ ದಾಖಲಾಗಿದೆ. ವಿಮಾನ ನಿಲ್ದಾಣವಿರುವ ಸುತ್ತಮುತ್ತಲ ಪ್ರದೇಶದಲ್ಲಿಯೂ ಇದೇ ತಾಪಮಾನವಿದೆ. ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಐಎಂಡಿ ಯ ಏರೋಡ್ರೋಮ್ ಹವಾಮಾನ ಕಚೇರಿಯ ನಿರ್ದೇಶಕ ಚನ್ನಬಸನಗೌಡ ಎಸ್ ಪಾಟೀಲ್ ಹೇಳಿದ್ದಾರೆ.
ಉತ್ತರ, ದಕ್ಷಿಣ ಕರ್ನಾಟಾಕಗಳಲ್ಲಿ ಬಿಸಿ ಗಾಳಿಯ ಎಚ್ಚರಿಕೆ ನೀಡಿರುವ ಐಎಂಡಿ, ಬೆಂಗಳೂರಿನಲ್ಲಿ 2-4 ಡಿಗ್ರಿಯಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. “ಐಟಿ ಸಿಟಿ ಬಯಲು ಪ್ರದೇಶವೂ ಅಲ್ಲ, ಗಿರಿಧಾಮವೂ ಅಲ್ಲ. ಇದು ಸರಾಸರಿ ಸಮುದ್ರ ಮಟ್ಟದಿಂದ 920 ಮೀಟರ್ ಎತ್ತರದಲ್ಲಿದೆ ಮತ್ತು ಮಿನಿ ಗಿರಿಧಾಮದಂತೆ, ಒಂದು ಬದಿಯಲ್ಲಿ ಬಯಲು ಪ್ರದೇಶ ಮತ್ತು ಇನ್ನೊಂದು ಗಿರಿಧಾಮದಿಂದ ಆವೃತವಾಗಿದೆ. ಬಿಸಿಗಾಳಿಯನ್ನು ಘೋಷಿಸುವ ನಿಯತಾಂಕಗಳು ಬೆಂಗಳೂರಿಗೆ ವಿಭಿನ್ನವಾಗಿದೆ. ಕಳೆದ ಕೆಲವು ದಿನಗಳಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 36.4-37 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿರುವುದು ಅಸಾಮಾನ್ಯ ವಿದ್ಯಮಾನವಾಗಿದೆ.
ಇದು ನಗರದಲ್ಲಿ ಸಾಮಾನ್ಯವಾಗಿ ದಾಖಲಾಗುತ್ತಿದ್ದ 34 ಡಿಗ್ರಿ ಸೆಲ್ಸಿಯಸ್‌ಗಿಂತ 2-3 ಡಿಗ್ರಿ ಹೆಚ್ಚು ತಾಪಮಾನವಾಗಿದ್ದು. ಸಾಮಾನ್ಯ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ಗೆ ಹೋಲಿಸಿದರೆ ರಾತ್ರಿಗಳು 2-3 ಡಿಗ್ರಿಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ಹೊಂದಿರುತ್ತವೆ, ”ಎಂದು ತಜ್ಞರು ಹೇಳಿದ್ದಾರೆ.
ಯಾದಗಿರಿಯಲ್ಲಿ ಗರಿಷ್ಠ 44.1 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 42.8 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 41.6 ಮತ್ತು ಬಾಗಲಕೋಟೆಯಲ್ಲಿ 41.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. IMD ಅಧಿಕಾರಿಗಳು ಜನರು ಚಹಾ ಅಥವಾ ಕಾಫಿ ಕುಡಿಯಬೇಡಿ ಮತ್ತು ಬದಲಿಗೆ ತಾಜಾ ಹಣ್ಣಿನ ರಸಗಳು, ಸಾಕಷ್ಟು ನೀರು, ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವಂತೆ ಮತ್ತು ಮಧ್ಯಾಹ್ನ 12-3 ರಿಂದ ಹೊರಾಂಗಣದಲ್ಲಿ ಇರುವುದನ್ನು ತಪ್ಪಿಸುವಂತೆ ಕೇಳಿಕೊಂಡಿದ್ದಾರೆ.