ಬೆಳಗಾವಿಯಲ್ಲಿ ಎಸಿಬಿ ದಾಳಿ ಆರ್.ಟಿ.ಒ ಸಂಬಂಧಿಕರ ಮನೆಯಲ್ಲಿ 42 ಲಕ್ಷ ರೂ. ನಗದು ಪತ್ತೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು 21 ಅಧಿಕಾರಿಗಳಿಗೆ ಸೇರಿದ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಎನ್. ಪಡಸಾಲಿ ಅವರ ಸಂಬಂಧಿಕರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಬೆಳಗಾವಿ ಆರ್‍ಟಿಒ ಅವರ ಸಂಬಂಧಿಕರ ಮನೆಯಲ್ಲಿ ಅನುಮಾನದ ಮೇಲೆ ತಪಸಾಣೆ ನಡೆಸಲಾಗಿದ್ದು, ಈ ವೇಳೆ ಸುಮಾರು 42 ಲಕ್ಷ ರೂಪಾಯಿಯಷ್ಟು ನಗದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಎನ್‍ಐ ಸುದ್ದಿಸಂಸ್ಥೆ ತನ್ನ ಟ್ವಟಿರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಾಗಿದೆ.

Recent Articles

spot_img

Related Stories

Share via
Copy link