ಭಾರತದಲ್ಲಿ ಕಚೇರಿ ನಿರ್ಮಿಸಿ ನೇಮಕಾತಿಗೆ ಆಹ್ವಾನಿಸಿದ ಗೂಗಲ್..!

            ಗೂಗಲ್‌ನಲ್ಲಿ ಕೆಲಸ(Google Jobs) ಮಾಡಲು ಬಯಸುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಗೂಗಲ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಕಚೇರಿಯನ್ನು ತೆರೆಯಲಿದೆ. ಪುಣೆಯಲ್ಲಿ ಕಚೇರಿ ಸ್ಥಾಪಿಸಲು ಸ್ಥಳ ಹುಡುಕಲಾಗಿದೆ. ವರ್ಷದ ದ್ವಿತೀಯಾರ್ಧದಲ್ಲಿ ಪುಣೆಯಲ್ಲಿ ಗೂಗಲ್ ತನ್ನ ಹೊಸ ಕಚೇರಿಯನ್ನು ತೆರೆಯುವ ನಿರೀಕ್ಷೆಯಿದೆ.

        ಗೂಗಲ್ ಈ ಹೊಸ ಕಚೇರಿಗೆ ನೇಮಕಾತಿಯನ್ನು ಪ್ರಾರಂಭಿಸಿದೆ. ಈ ಹೊಸ ನೇಮಕಾತಿಗಳ ಪ್ರಕ್ರಿಯೆಯು ಗೂಗಲ್‌ನ ಗುರುಗ್ರಾಮ, ಹೈದರಾಬಾದ್ ಮತ್ತು ಬೆಂಗಳೂರು ಕಚೇರಿಗಳಲ್ಲಿ ನಡೆಯುತ್ತಿದೆ.

ಸುಧಾರಿತ ಕ್ಲೌಡ್ ತಂತ್ರಜ್ಞಾನಕ್ಕಾಗಿ(Advanced Cloud Technology) ಗೂಗಲ್ ಈ ಹೊಸ ನೇಮಕಾತಿಗಳನ್ನು ಮಾಡುತ್ತಿದೆ. ಭಾರತದ ಗೂಗಲ್ ಕ್ಲೌಡ್ ಇಂಜಿನಿಯರಿಂಗ್ ನ ವಿಪಿ ಅನಿಲ್ ಬನ್ಸಾಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗೂಗಲ್ ಕ್ಲೌಡ್‌ಗೆ(Google Cloud) ಅಗತ್ಯವಿರುವ ಟ್ಯಾಲೆಂಟ್ ಪೂಲ್ ಭಾರತದಲ್ಲಿದೆ ಎಂದು ಅವರು ಹೇಳಿದ್ದಾರೆ. ಭಾರತವು ಗೂಗಲ್‌ಗೆ ಉತ್ತಮ ಸ್ಥಳವಾಗಿದೆ. ಜಾಗತಿಕ ಎಂಜಿನಿಯರಿಂಗ್ ತಂಡದೊಂದಿಗೆ ಒಟ್ಟಾಗಿ ಕೆಲಸ ಮಾಡಲು ಕಳೆದ 12 ತಿಂಗಳುಗಳಲ್ಲಿ ಭಾರತದಲ್ಲಿ ನಿರ್ಮಿಸಲಿರುವ ಅಭಿವೃದ್ಧಿ ಕೇಂದ್ರಕ್ಕಾಗಿ ಭಾರತದ ಉನ್ನತ ಎಂಜಿನಿಯರಿಂಗ್ ಪ್ರತಿಭೆಗಳನ್ನು ನೇಮಿಸಿಕೊಳ್ಳಲಾಗಿದೆ.

ಭಾರತದ ಈ ಪ್ರತಿಭೆಗಳು ಜಾಗತಿಕ ಎಂಜಿನಿಯರಿಂಗ್ ತಂಡದ ಸಹಯೋಗದೊಂದಿಗೆ ಸುಧಾರಿತ ಕ್ಲೌಡ್ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಾರೆ ಅಂತಾ ತಿಳಿಸಿದ್ದಾರೆ.

ಈ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಗೂಗಲ್ ನಲ್ಲಿ ಕೆಲಸಕ್ಕೆ ಆಯ್ಕೆಯಾದರೆ ಆಕರ್ಷಕ ವೇತನದ ಜೊತೆಗೆ ಅನೇಕ ಸೌಲಭ್ಯಗಳು ಸಿಗಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap