ಮೈಸೂರು:
ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನವೆಂಬರ್1 ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದ್ದಾರೆ.
ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಡಾ. ಕೆ.ಎಂ ಅಶೋಕ್ ವಿರುದ್ಧ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಆದರೆ, ಆತನಿಗೆ ಕನ್ನಡ ರಾಜ್ಯೋತ್ಸವ ದಿನದಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಆತನ ವಿರುದ್ಧ ರೌಡಿ ಶೀಟರ್ ಆರೋಪ ಇರುವ ಬಗ್ಗೆ ವರದಿಯಾದ ಬಳಿಕ, ಪ್ರಶಸ್ತಿಯನ್ನು ವಾಪಸ್ ಪಡೆಯುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೊತ್ವಾಲನ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ ..ಈತ ರೌಡಿ ಶೀಟರ್ ಎಂಬುದು ಗೊತ್ತಿದ್ದೂ ಸಹ ರಾಜ್ಯೋತ್ಸವ ಕೊಟ್ಟಿದ್ದು ಯಾರ ಒತ್ತಡದ ಮೇರೆಗೆ ಎಂದು ಜಿಲ್ಲಾಡಳಿತ ಬಹಿರಂಗಪಡಿಸಲಿ…ಪ್ರಶಸ್ತಿಯ ಪಾವಿತ್ರ್ಯತೆ ಹಾಳು ಮಾಡಿದ ಜಿಲ್ಲಾಡಳಿತ, ಹಾಗೂ ಕೆಲ ಪಟ್ಟಭದ್ರಹಿತಾಸಕ್ತಿಗಳು ‘ಸಾಂಸ್ಕೃತಿಕ ನಗರಿಯನ್ನು’ ಅಸಂಸ್ಕೃತರ ತವರೂರಾಗಿ’ ಮಾಡುವುದು ಹೊರಟಿರುವುದು ರಾಜ್ಯದ ದುರಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.