ರಾಜ್ಯದಲ್ಲಿ ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳ ‘ಶೈಕ್ಷಣಿಕ ಯುದ್ಧ: ಕೇಂದ್ರ, ರಾಜ್ಯ ಸರ್ಕಾರದ ವಿರುದುದ್ಧ ವಿದ್ಯಾರ್ಥಿಗಳ ಬೇಸರ

ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಗುಡಿಬಂಡೆ ಭರತ್ ಜಿ.ಎಸ್

ಬೆಂಗಳೂರು : ಎದ್ವೋ ಬಿದ್ವೋ ಅಂತ ಪ್ರಾಣ ಅಂಗೈಯಲ್ಲಿ ಇಟ್ಟುಕೊಂಡು ಭಾರತಕ್ಕೆ 20 ಸಾವಿರಕ್ಕೂ ಹೆಚ್ಚು ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದಿದ್ದಾರೆ, ಮೆಡಿಕಲ್ ವಿದ್ಯಾರ್ಥಿಗಳಿಗೆ ಶೈಕ್ಷಿಕ ವ್ಯವಸ್ಥೆ ನೀಡುತ್ತೇವೆ ಎಂದು ಹೇಳಿ ನಾಲ್ಕೈದು ತಿಂಗಳಾದರೂ ಯಾವುದೇ ನೆರವು, ಸಂಪರ್ಕ ಸಿಗದೇ ವಿದ್ಯಾರ್ಥಿವಲಯ ನಿಜವಾದ ‘ಶೈಕ್ಷಣಿಕ ಯುದ್ಧ’ ಮಾಡುತ್ತಿದ್ದಾರೆ.

ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದು, ಅದರಲ್ಲಿ ಪ್ರಜಾಪ್ರಗತಿ ಗೆ ಸಿಕ್ಕ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸಾವಿರಕ್ಕೂ ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ, ಇವರು ಬಂದು ನಾಲ್ಕೈದು ತಿಂಗಳಾದರೂ, ಸ್ಥಳೀಯ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ರಾಜ್ಯ ಸರಕಾರ ಸೆರಿದಂತೆ ಯಾರು ಸಂಪರ್ಕಮಾಡಿಲ್ಲ, ವಿದ್ಯಾಥಿಗಳು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು ಪ್ರಯೋಜನಾಗಿಲ್ಲ ಎಂದು ಮೆಡಿಕಲ್ ವಿದ್ಯಾರ್ಥಿಗಳು ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

ಆನ್ಲೈನ್ ತರಗತಿ ಪ್ರಯೋಜನಾಗುತ್ತಿಲ್ಲ : ಉಕ್ರೇನ್ ನಿಂದ ರಾಜ್ಯಕ್ಕೆ ಬಂದ ಬಹುತೇಕ ವಿದ್ಯಾರ್ಥಿಗಳ ಸಮಸ್ಯೆ ಇದು, ಆನ್ಲೈನ್ ತರಗತಿ ನಡೆಯುತ್ತಿದೆ ಆದರೆ ಸರಿಯಾಗಿ ಅರ್ಥವಾಗುತ್ತಿಲ್ಲ ಹಾಗೂ ನಾವು ಮೆಡಿಕಲ್ ವಿದ್ಯಾರ್ಥಿಗಳಾದ್ದರಿಂದ ನಮಗೆ ಪ್ರಾಕ್ಟಿಕಲ್ ಸೆರಿದಂತೆ ಬೆರೆ ಏನು ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಹಾಗಾಗಿ ನಮಗೆ ಸ್ಥಳೀಯ ಕಾಲೇಜಿನಲ್ಲಿ ಅವಕಾಶ ಕಲ್ಪಿಸಿಕೊಡಿ ಎಂದು ವಿದ್ಯಾರ್ಥಿಗಳು ಪ್ರಜಾಪ್ರಗತಿ ಪತ್ರಿಕೆಯ ಮುಕಾಂತರ ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಸ್ಥಳೀಯ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಕಲ್ಪಿಸಿ : ಉಕ್ರೇನ್ ನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಪ್ರಾಣವನ್ನು ರಕ್ಷಿಸಿಕೊಳ್ಳುವ ಯುದ್ಧದಲ್ಲಿ ಗೆದಿದ್ದಾರೆ, ಆದರೆ ಶೈಕ್ಷಣಿಕ ಯುದ್ಧದಲ್ಲಿ ಇನ್ನೂ ಹೋರಾಟ ಮಾಡುತ್ತಿದ್ದಾರೆ, ಇದಕ್ಕೆ ಸರಕಾರದ ತುರ್ತು ನಿರ್ಧಾರ ಬೇಕಿದೆ, ಸಾವಿರಾರು ವಿದ್ಯಾರ್ಥಿಗಳ ಬಧುಕ ಅತಂತ್ರವಾಗಿ, ಮೆಡಿಕಲ್ ಕನಸ್ಸು ಸೋಲುವ ಹಂತಕ್ಕೆ ತಲುಪಿದೆ ಎಂದು ಚಿಂತಾಮಣಿ ಮೂಲದ ಹರ್ಷಿತ ಎಂಬ ಮೆಡಿಕಲ್ ವಿದ್ಯಾರ್ಥಿ ತಮ್ಮ ನೋವನ್ನು ವ್ಯಕ್ತಪಡಿಸಿದರು.

ಪರ್ಯಾಯ ವ್ಯವಸ್ಥೆಗೆ ತಡ ಯಾಕೆ?

  • ಭಾರತದ ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಶೈಕ್ಷಣಿಕ ವ್ಯವಸ್ಥೆ ನಿಡುವ ಸಮಯಕ್ಕೆ, ಉಕ್ರೇನ್ ಸಹಜ ಸ್ಥಿತಿಗೆ ಮರಳಿದರೆ ವಿದ್ಯಾರ್ಥಿಗಳ ನಿಲುವು ಅತಂತ್ರವಾಗಬಹುದು.
  • ಉಕ್ರೇನ್ ಮೆಡಿಕಲ್ ವಿಶ್ವವಿದ್ಯಾಲ ಹಾಗೂ ಭಾರತೀಯ ಮೆಡಿಕಲ್ ವಿಶ್ವವಿದ್ಯಾಲಗಳ ಪಠ್ಯಕ್ರಮಗಳು ವ್ಯತ್ಯಸವಿರಬುದು.!
  • ಉಕ್ರೇನ್ ನಿಂದ ಭಾರತಕ್ಕೆ ವಾಪಸ್ ಬಂದ ಮೆಡಿಕಲ್ ವಿದ್ಯಾರ್ಥಿಗಳು ಶೈಕ್ಷಣಿಕ ಯುದ್ಧ ಮಾಡುತ್ತಿದ್ದು ಸರಕಾರ ತುರ್ತು ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.

ವಿದ್ಯಾರ್ಥಿಗಳ ಅಭಿಪ್ರಾಯ

ನಾವು ಮೆಡಿಕಲ್ ಮಾಡಬೇಕು ಎಂಬ ಆಸೆಯಿಂದ ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೆವು, ಆದರೆ ಯುದ್ಧದ ಕಾರಣದಿಂದ ಪ್ರಾಣ ಉಳಿಸಿಕೊಂಡು ಭಾರತಕ್ಕೆ ವಾಪಸ್ ಬಂದೆವು, ಸ್ಥಳೀಯವಾಗಿ ಶೈಕ್ಷಣಿಕ ವ್ಯವಸ್ಥೆ ಕಲ್ಪಸುತ್ತೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರ ಹೇಳಿತ್ತು ಆದರೆ ಇದುವರೆಗೂ ನಮ್ಮ ಸಂಪರ್ಕಕ್ಕೆ ಯಾರು ಬಂದಿಲ್ಲ, ನಾವು ಸರಕಾರಕ್ಕೆ ಮನವಿ ಮಾಡಿದಾಗ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಅನುಮತಿ ಸಿಕ್ಕಲ್ಲ ಹಾಗಾಗಿ ತಡವಾಗುತ್ತಿದೆ, ಅನುಮತಿ ಸಿಕ್ಕ ತಕ್ಷಣ ಶೈಕ್ಷಣಿಕ ವೈವಸ್ಥೆ ಕಲ್ಪಿಸುತ್ತೇವೆ ಎಂದು ಉತ್ತರಿಸುತ್ತಿದ್ದಾರೆ. ಇದರಿಂದ ನಮ್ಮ ಮೆಡಿಕಲ್ ಕನಸ್ಸು ಈಡೇರುತ್ತಾ ಎಂಬ ಅನುಮಾನ ನಮಗೆ ಕಾಡುತ್ತಿದೆ, ದಯವಿಟ್ಟು ಸರಕಾರ ನಮ್ಮ ನೆರವಿಗೆ ಕೂಡಲೇ ಬರಬೇಕು ಎಂದು ಒತ್ತಾಯಿಸಿದರು.

ಹರ್ಷಿತ, ಉಕ್ರೇನ್ ನಿಂದ ಬಂದ ಮೆಡಿಕಲ್ ವಿದ್ಯಾರ್ಥಿ ಚಿಂತಾಮಣಿ

 

ಉಕ್ರೇನ್ ನಲ್ಲಿ ಪ್ರಾಣದ ಯುದ್ಧದಲ್ಲಿ ಬದುಕಿ ಬಂದಿದೇವೆ, ಆದರೆ ಶೈಕ್ಷಣಿಕ ಯುದ್ಧದಲ್ಲಿ ನಮಗೆ ಅನ್ಯಾಯವಾಗುತ್ತಿದೆ ಇದರ ಬಗ್ಗೆ ಸರಕಾರ ಸೂಕ್ತ ಕ್ರಮ ಕೂಗೊಳ್ಳಬೇಕು. ನಾವು ಪ್ರಸ್ತುತ ಉಕ್ರೇನ್ ಮೆಡಿಕಲ್ ಕಾಲೇಜಿನಿಂದ ಆನ್ಲೈನ್ ತರಗತಿ ಕೇಳುತ್ತಿದೇವೆ, ಆದರೆ ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಪ್ರಯೋಜನವಾಗುತ್ತಿಲ್ಲ, ಸ್ಥಳೀಯ ಕಾಲೇಜಿನಲ್ಲಿ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ. ನಮಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ನಿಂದ ಅನುಮತಿ ಕೊಡಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರ ಬರೆದಿದ್ದೇವೆ ಇದುವರೆಗೂ ನಮಗೆ ಯಾವುದೇ ಉತ್ತರ ಲಭ್ಯವಾಗಿಲ್ಲ,

ನಂದಕುಮಾರ್, ಉಕ್ರೇನ್ ನಿಂದ ಬಂದ ಮೆಡಿಕಲ್ ವಿದ್ಯಾರ್ಥಿ, ಚಿಕ್ಕಬಳ್ಳಾಪುರ

Recent Articles

spot_img

Related Stories

Share via
Copy link
Powered by Social Snap