ಕೊಪ್ಪಳ:

ಸನ್ಯಾಸ ಸ್ವೀಕರಿಸಿ ಜನರಿಗೆ ಆಶೀರ್ವಚನ ನೀಡಬೇಕಿದ್ದ ಸ್ವಾಮೀಜಿಯೊಬ್ಬರು ಇತ್ತೀಚೆಗೆ ಹುಡುಗಿಯಬ್ಬಳ ಪ್ರೀತಿಯ ಬಲೆಗೆ ಸಿಕ್ಕು ಪೀಠತ್ಯಾಗ ಮಾಡಿದ್ದರು ಇಷ್ಟು ದಿನ ಸುಮ್ಮನಿದ್ದ ಸ್ವಾಮೀಜಿ ಗೆಳತಿಯೊಡನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕೊಪ್ಪಳದ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಹೀಗೆ ಪ್ರೀತಿಗೆ ಬಿದ್ದು ಪೀಠತ್ಯಾಗ ಮಾಡಿದ ಸ್ವಾಮೀಜಿ. ಇವರು ಕಳೆದ ಜನವರಿಯಿಂದ ಪೀಠ ಬಿಟ್ಟಿದ್ದು ನಾಪತ್ತೆಯಾಗಿದ್ದರು. ಆದರೆ ಈಗ ತಮ್ಮ ಗೆಳತಿಯೊಡನೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿತ್ರ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಮುಂಡರಗಿ ಕಾಲೇಜಿನಲ್ಲಿ ಪಾಠಮಾಡಲು ತೆರಳುತ್ತಿದ್ದ ಸ್ವಾಮೀಜಿ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಸ್ನೇಹ ಬೆಳೆಸಿದ್ದಾರೆ. ಬಳಿಕ ಅದೇ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇದಾದ ನಂತರ ಸ್ವಾಮೀಜಿ ಆ ಯುವತಿಗಾಗಿ ಪೀಠ ತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಈ ಕುರಿತಂತೆ ಭಕ್ತರು ಪ್ರಶ್ನಿಸಲು ಮಠದ ಆಡಳಿತ ಮಂಡಳಿ “ಸ್ವಾಮೀಜಿ ವೈಯುಕ್ತಿಕ ಕಾರಣದಿಂದ ಪೀಠತ್ಯಾಗ ಮಾಡಿದ್ದಾರೆ” ಎಂದು ಹಾರಿಕೆಯ ಉತ್ತರ ನೀಡಿ ಮೌನವಾಗಿತ್ತು.ಮೂರು ತಿಂಗಳ ಬಳಿಕ ಈಗ ಸ್ವಾಮೀಜಿ ಹಾಗೂ ಯುವತಿ ಜತೆಯಾಗಿ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
