ಇಸ್ರೋ ಸ್ಪೇಸ್ ಡಾಕಿಂಗ್ ಪ್ರಯೋಗ ಎರಡನೇ ಬಾರಿ ಮುಂದೂಡಿಕೆ

ಬೆಂಗಳೂರು:

    ಬಾಹ್ಯಾಕಾಶ ಡಾಕಿಂಗ್ ಪ್ರಯೋಗ  ಕಾರ್ಯಾಚರಣೆಯಡಿಯಲ್ಲಿ ಎರಡು ಉಪಗ್ರಹಗಳ ಬಹುನಿರೀಕ್ಷಿತ ಡಾಕಿಂಗ್ ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದೂಡಿದೆ. ಒಂದು ಉಪಗ್ರಹ ಇನ್ನೊಂದರ ಕಡೆಗೆ ಚಲಿಸುವುದು ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಉಲ್ಲೇಖಿಸಿದೆ.

   ಈ ಕಾರ್ಯಾಚರಣೆ ಮೊನ್ನೆ ಜನವರಿ 7 ರಂದು ನಡೆಯಬೇಕಿತ್ತು, ಆದರೆ ಇಂದಿಗೆ ಮುಂದೂಡಲಾಯಿತು. ನಿನ್ನೆ ಪ್ರಕಟಣೆ ಹೊರಡಿಸಿರುವ ಇಸ್ರೊ, ಸ್ಪೇಸ್‌ಕ್ರಾಫ್ಟ್-ಎ ನಲ್ಲಿ 500 ಮೀ ನಿಂದ 225 ಮೀ ಹತ್ತಿರಕ್ಕೆ ಚಲಿಸಲು ಡ್ರಿಫ್ಟ್ ನ್ನು ಪ್ರಾರಂಭಿಸಿತು ಎಂದು ಹೇಳಿದೆ.

  ಕಳೆದ ವರ್ಷ ಡಿಸೆಂಬರ್ 30ರಂದು ಇಸ್ರೋ ಪಿಎಸ್ ಎಲ್ ವಿ-ಸಿ-60 ಸಮಭಾಜಕಕ್ಕೆ 55 ಡಿಗ್ರಿ ಇಳಿಜಾರಿನಲ್ಲಿ ಎರಡು ಉಪಗ್ರಹಗಳನ್ನು ಉಡಾಯಿಸಿತು. 375 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾದ ಸ್ಪಾಡೆಕ್ಸ್ ಮಿಷನ್, ಬಾಹ್ಯಾಕಾಶದಲ್ಲಿ ಎರಡು ಮಾನವರಹಿತ ಬಾಹ್ಯಾಕಾಶ ನೌಕೆಗಳಾದ ಎಸ್ ಡಿಎಕ್ಸ್01, ಚೇಸರ್ ಎಂದು ಕರೆಯಲ್ಪಡುವ ಎಸ್ ಡಿಎಕ್ಸ್02 ಮತ್ತು ಟಾರ್ಗೆಟ್ ಎಂದು ಕರೆಯಲ್ಪಡುವ ಎಸ್ ಡಿಎಕ್ಸ್02 ಗಳ ಯಶಸ್ವಿ ಸ್ವಾಯತ್ತ ಡಾಕಿಂಗ್ ನ್ನು ಸಾಧಿಸುವ ಗುರಿಯನ್ನು ಹೊಂದಿತ್ತು, ಪ್ರತಿಯೊಂದೂ 220 ಕೆಜಿ ತೂಕವಿತ್ತು.

   ಕೇಂದ್ರ ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಇಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಕ್ಯಾಂಪಸ್‌ನಲ್ಲಿ ಡಾಕಿಂಗ್‌ಗೆ ಹಾಜರಾಗಬೇಕಿತ್ತು. ಆ ಕಾರ್ಯಕ್ರಮ ಈಗ ರದ್ದಾಗಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

   ಡಾಕಿಂಗ್ ಎನ್ನುವುದು ಗಗನಯಾತ್ರಿಗಳು ಮತ್ತು ಉಪಕರಣಗಳನ್ನು ಒಂದು ಬಾಹ್ಯಾಕಾಶ ನೌಕೆಯಿಂದ ಅದು ಡಾಕ್ ಮಾಡಿರುವ ಇನ್ನೊಂದು ಬಾಹ್ಯಾಕಾಶ ನೌಕೆಗೆ ವರ್ಗಾಯಿಸಲು ಸಹಾಯ ಮಾಡುವುದರಿಂದ ಡಾಕಿಂಗ್ ನಿರ್ಣಾಯಕವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link