


ನವದೆಹಲಿ : ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ನಡೆದ ಚುನಾವಣೆಯಲ್ಲಿ ಪ.ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಬಿಜೆಪಿ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ತಮಿಳು ನಾಡಿನಲ್ಲಿ ಟಿವಿಕೆ ಪಕ್ಷ ಅಧಿಕಾರ ಹಿಡಿದಿದೆ.
ಯುಡಿಎಫ್ ಕಮಾಲ್: ಕೇರಳಂನಲ್ಲಿ ಕಳೆದ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗದ ಎಲ್ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಮಾಲ್ ಮಾಡಿದೆ. ಯುಡಿಎಫ್ ೧೪೦ ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ ಅಗತ್ಯವಿರುವ ೭೧ ಸ್ಥಾನಗಳನ್ನು ದಾಟಿ ೧೦೫ ಸ್ಥಾನಗಳನ್ನು ಗಳಿಸಿದೆ. ಎಲ್ಡಿಎಫ್ ೩೫ , ಬಿಜೆಪಿ- ೩ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಅಸ್ಸಾಂನಲ್ಲಿ ಮತ್ತೆ ಬಿಜೆಪಿ: ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿರುವ ಬಿಜೆಪಿ ಅಸ್ಸಾಂನಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಯುವತ್ತ ಹೆಜ್ಜೆ ಹಾಕಿದೆ, ೧೨೬ ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ ಅಗತ್ಯವಾಗಿರುವ ೬೪ ಸ್ಥಾನಗಳನ್ನು ದಾಟಿ ೧೦೧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಜಯಭೇರಿ ಬಾರಿಸಿದೆ.
ಕಾಂಗ್ರೆಸ್ ಅಧಿಕಾರ ಹಿಡಿಯಬೇಕು ಎನ್ನವು ಆಸೆ ನಿರಾಸೆಯಾಗಿದೆ. ಕೇವಲ ೨೬ ಸ್ಥಾನಗಳಿಗಷ್ಟೇ ಶಕ್ತಿವಾಗಿದೆ, ಎಐಡಿಎಫ್ ೨, ಮತ್ತು ಇತರರು ಒಂದು ಕ್ಷೇತ್ರದಲ್ಲಿ ಮುನ್ನೆಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತೊಮ್ಮೆ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮೋಡಿ ಮಾಡಿದ್ದಾರೆ
ಪುದುಚೆರಿಯಲ್ಲಿ ಎನ್ಡಿಎ: ಪುದುಚೆರಿಯಲ್ಲಿ ಎನ್ ಡಿಎ ನೇತೃತ್ವದ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರ ಹಿಡಿದಿದೆ, ೩೦ ಕ್ಷೇತ್ರಗಳ ಪೈಕಿ ಆಡಳಿತಾರೂಢ ಎನ್ ಆರ್ ಸಿ ೧೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ೨೧ ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲವು :
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲವು ಸಾಧಿಸುವ ಮೂಲಕ ಎಲ್ಡಿಎಫ್ ಸರ್ಕಾರವನ್ನು ಸೋಲಿಸಿದೆ. ಈ ಮೂಲಕ ಕೇರಳದಲ್ಲಿ ಮಾತ್ರವೇ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್ ಸರ್ಕಾರ ಅಂತ್ಯವಾಗಿದೆ.
ಎಕ್ಸಿಟ್ ಪೋಲ್ ಮುನ್ಸೂಚನೆಗಳಿಗೆ ಅನುಗುಣವಾಗಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆ ಸಿಕ್ಕಿದೆ. ಮೊದಲ ಕೆಲವು ಸುತ್ತಿನ ಎಣಿಕೆಯ ನಂತರ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ೧೪೦ ವಿಧಾನಸಭಾ ಸ್ಥಾನಗಳ ಪೈಕಿ ೧೦೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಿಪಿಐ(ಎಂ) ನೇತೃತ್ವದ ಆಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಕೇವಲ ೩೫ ಕ್ಷೇತ್ರಗಳನ್ನು ಸಾಧಿಸಿದೆ.
ಇದೀಗ ಯುಡಿಎಫ್ಗೆ ೧೦೨, ಎಲ್ಡಿಎಫ್ಗೆ ೩೫, ಹಾಗೂ ಎನ್ಡಿಎ ೩ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಫಲಿತಾಂಶ ಆಡಳಿತ ಪಕ್ಷಕ್ಕೆ ಹಿನ್ನಡೆಯನ್ನು ಸೂಚಿಸುತ್ತದೆ. ಕನಿಷ್ಠ ಒಂದು ಡಜನ್ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರು ಜಿಲ್ಲೆಯಲ್ಲಿ ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಾದ ಧರ್ಮಡಂನಲ್ಲಿ ಆರಂಭಿಕ ಸುತ್ತುಗಳಲ್ಲಿಯೇ ಹಿಂದುಳಿದಿದ್ದರು.
ಆರAಭಿಕ ಸೋಲನ್ನು ಎದುರಿಸುತ್ತಿರುವ ಇತರೆ ಸಚಿವರಲ್ಲಿ ವೀಣಾ ಜಾರ್ಜ್, ಎಂ. ಬಿ. ರಾಜೇಶ್, ಒ. ಆರ್. ಕೇಲು, ಆರ್ ಬಿಂಧು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ. ಬಿ. ಗಣೇಶ್ ಕುಮಾರ್, ವಿ. ಎನ್. ವಾಸವನ್, ವಿ. ಶಿವನ್ಕುಟ್ಟಿ, ವಿ ಅಬ್ದುರಹಿಮಾನ್, ಕಾಡನ್ನಪ್ಪಲ್ಲಿ ರಾಮಚಂದ್ರನ್, ಎ. ಕೆ. ಸಸೀಂದ್ರನ್ ಮತ್ತು ರೋಶಿ ಆಗಸ್ಟಿನ್ ಸೇರಿದ್ದಾರೆ.
ವಿಜಯ್ ನೇತೃತ್ವದ ಟಿವಿಕೆ ಪಕ್ಷ ವಿಜಯದ ಪತಾಕೆ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಪಕ್ಷಗಳನ್ನು ಹಿಂದಿಕ್ಕಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ವಿಜಯದ ಪತಾಕೆ ಹಾರಿಸಿದ್ದು, ನಟ ವಿಜಯ್ ರಾಜಕೀಯ ರಂಗದಲ್ಲೂ ಯಶಸ್ಸು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ತಮಿಳುನಾಡು ಇತಿಹಾಸದಲ್ಲಿ ದ್ರಾವಿಡ ಹಾಗೂ ಕಾಂಗ್ರೆಸ್ನ್ನು ಹೊರತುಪಡಿಸಿ ಮೂರನೇ ರಾಜಕೀಯ ಶಕ್ತಿ ಉದಯಿಸಿದೆ. ನಟ ವಿಜಯ್ ತಮಿಳುನಾಡಿನ ಹೊಸ ಜನ ನಾಯಕರಾಗಿ ಹೊರಹೊಮ್ಮಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಹಾಗೂ ನಟ ವಿಜಯ್ ಅವರ ಜನಪ್ರಿಯತೆಯ ಅಲೆಯಲ್ಲಿ ಆಡಳಿತಾರೂಢ ಡಿಎಂಕೆ ಕೊಚ್ಚಿಹೋಗಿ ಚುನಾವಣೆಯಲ್ಲಿ ನೆಲಕಚ್ಚಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂಬ ಮತಗಟ್ಟೆ ಸಮೀಕ್ಷೆಗಳು ಹುಸಿಯಾಗಿದ್ದು ಡಿಎಂಕೆಗೆ ತೀವ್ರ ಮುಖಭಂಗವಾಗಿದ್ದು ಚುನಾವಣೆಯಲ್ಲಿ ಹೀನಾಯ ಸೋಲಿಗೆ ಒಳಗಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರ ಹಿಡಿಯುವ ಎಐಎಡಿಎಂಕೆ ಕನಸಿಗೆ ವಿಜಯ್ ಅಡ್ಡಗಾಲು ಹಾಕಿದ್ದು ಎಐಎಡಿಎಂಕೆ ಸಹ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.
ಟಿವಿಕೆ ಪಕ್ಷ ೧೧೧, ಎಡಿಎಂಕೆ ೬೫,. ಡಿಎಂಕೆ ೫೭, ಇತರರರು ೧ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ.
ದೀದಿ ಕೋಟೆಯಲ್ಲಿ ಅರಳಿದ ಕಮಲ
ಇಡೀ ದೇಶದ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಮಮತಾ ದೀದಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಇಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿ ನಳನಳಿಸಿದೆ. ಟಿಎಂಸಿ ಸೋತು ನೆಲಕಚ್ಚಿದೆ.
ಪಶ್ಚಿಮ ಬಂಗಾಳದಲ್ಲಿ ಅಧಿಪತ್ಯ ಸಾಧಿಸಿ ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿದ್ದ ಮಮತಾ ಬ್ಯಾನರ್ಜಿಯವರ ಆಳ್ವಿಕೆ ಅಂತ್ಯಗೊAಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಆಡಳಿತಕ್ಕೆ ಮತದಾರರು ಅಸ್ತು ಎಂದಿದ್ದಾರೆ.
ಪಶ್ವಿಮ ಬಂಗಾಳ ಚುನಾವಣೆ ಗೆಲುವು ಪ್ರಧಾನಿ ಮೋದಿ ಹಾಗೂ ಟಿಎಂಸಿಯ ಮಮತಾ ಬ್ಯಾನರ್ಜಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅದರಲ್ಲೂ ಮಮತಾ ಬ್ಯಾನರ್ಜಿ ಅವರಿಗಂತೂ ಈ ಚುನಾವಣೆ ಅವರ ರಾಜಕೀಯ ಅಳಿವು ಉಳಿವನ್ನು ನಿರ್ಧರಿಸುವ ಚುನಾವಣೆ ಎಂದೇ ಹೇಳಲಾಗಿತ್ತು. ಈ ಪ್ರತಿಷ್ಠೆಯ ಹೋರಾಟದ ಕಣದಲ್ಲಿ ಪ್ರಧಾನಿ ಮೋದಿಯವರು ಗೆದ್ದು ಬೀಗಿದ್ದರೆ ಮಮತಾ ದೀದಿ ಸೋತು ಮುಖಭಂಗಕ್ಕೆ ಒಳಗಾಗಿದ್ದಾರೆ.
ಮೊದಲು ಎಡಪಕ್ಷಗಳ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳ ನಂತರ ಮಮತಾ ಬ್ಯಾನರ್ಜಿಯವರ ವಶವಾಗಿತ್ತು. ಈಗ ೧೫ ವರ್ಷಗಳ ನಂತರ ಪಶ್ಚಿಮ ಬಂಗಾಳ ಬಿಜೆಪಿಯ ವಶಕ್ಕೆ ಬಂದಿದೆ. ಇಲ್ಲಿ ಹಲವು ವರ್ಷಗಳ ಆಡಳಿತ ನಡೆಸಿದ್ದ ಎಡಪಕ್ಷಗಳು ಹೇಳ ಹೆಸರಿಲ್ಲದಂತೆ ಮೂಲೆಗೆ ಸರಿದಿವೆ. ಹಾಗೆಯೇ ಚುನಾವಣೆಯಲ್ಲಿ ಮೈತ್ರಿಯಿಲ್ಲದೆ ಒಂಟಿಯಾಗಿ ಸ್ಪಂದಿಸಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿ ನೆಲಕಚ್ಚಿದೆ.
ಬಿಜೆಪಿ ೨೦೭, ಟಿಎಂಸಿ ೮೦, ಐಎನ್ಸಿ ೨, ಇತರರರು ೫ ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.
ಪ.ಬಂಗಾಳ
ಎನ್.ಡಿ.ಎ (೨೦೮)
ಟಿಎಂಸಿ+ (೭೯)
ಐಎನ್ಸಿ (೨)
ಇತರರು (೪)
ತಮಿಳು ನಾಡು
ಟಿವಿಕೆ (೧೦೭)
ಡಿಎಂಕೆ (೭೪)
ಎನ್.ಡಿ.ಎ (೫೩)
ಕೇರಳ
ಯುಡಿಎಫ್ (೧೦೨)
ಎಲ್ಡಿಎಫ್ (೩೫)
ಎನ್.ಡಿ.ಎ (೩)
ಅಸ್ಸಾಂ
ಎನ್.ಡಿ.ಎ (೧೦೨)
ಐಎನ್ಸಿ (೨೧)
ಇತರರು (೩)
ಪುದುಚರಿ
ಎನ್.ಡಿ.ಎ (೨೦)
ಡಿಎಂಕೆ+ (೬)
ಟಿವಿಕೆ (೨)
ಇತರರು (೧)
ಯುಪಿಎ (೧)








