ಬಿಯಾಂಡ್ ಬೆಂಗಳೂರು ಪರಿಕಲ್ಪನೆಗೆ ಪ್ರೋತ್ಸಾಹ

ಬೆಂಗಳೂರು:

    ಉಪನಗರ ರೈಲು ಯೋಜನೆಯ (ಸಬರ್ಬನ್ ರೈಲ್ವೆ) ಮೊದಲನೇ ಹಂತದ ಕಾಮಗಾರಿಗಳು ಚುರುಕಾಗಿ ಸಾಗಿವೆ ಎಂದು ಸಚಿವ ಎಂ. ಬಿ. ಪಾಟೀಲ್ ಎಂದು ಹೇಳಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಎರಡನೇ ಹಂತದಲ್ಲಿ ಚಿಕ್ಕಬಳ್ಳಾಪುರ, ಕುಣಿಗಲ್, ಡಾಬಸ್ ಪೇಟೆ, ಹೆಜ್ಜಾಲ ಮುಂತಾದ ಬೆಂಗಳೂರಿನ ಹೊರವಲಯಗಳಿಗೂ ಸಬರ್ಬನ್ ರೈಲು ಸಂಚಾರವನ್ನು ವಿಸ್ತರಿಸಲು ಯೋಜನೆ ರೂಪಿಸಿ ಅನುಮತಿಗಾಗಿ ಕೇಂದ್ರ ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

   ರಾಜಧಾನಿ ಬೆಂಗಳೂರಿಗೆ ಹೊರ ಜಿಲ್ಲೆಗಳಿಂದ ಪ್ರಯಾಣಿಸುವವರಿಗಾಗಿ ಸಂಪರ್ಕವನ್ನು ಸರಳಗೊಳಿಸಿ, ದಟ್ಟಣೆ ಕಡಿಮೆ ಮಾಡಿ, ರಸ್ತೆ ಮಾರ್ಗದ ಒತ್ತಡವನ್ನು ಕಡಿಮೆಗೊಳಿಸಲು ಎರಡನೇ ಹಂತದ ಯೋಜನೆಯು ಸಹಕಾರಿಯಾಗಲಿದೆ. ಅಲ್ಲದೇ ಉದ್ಯಮಗಳನ್ನು ಬೆಂಗಳೂರಿನ ಹೊರವಲಯಗಳಿಗೆ ವಿಸ್ತರಿಸಿ ಬಿಯಾಂಡ್ ಬೆಂಗಳೂರು ಪರಿಕಲ್ಪನೆಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Recent Articles

spot_img

Related Stories

Share via
Copy link