ರಾಜ್ಯಾದ್ಯಂತ ಟ್ರಾನ್ಸ್ ಫಾರ್ಮರ್ಗಳ ಅಭಿಯಾನ 

ಬೆಸ್ಕಾಂ ಇಲಾಖೆಯಿಂದ ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್ ಫಾರ್ಮರ್ ನಿರ್ವಹಣೆ

 ಬೆಂಗಳೂರು ನಗರ ಜಿಲ್ಲೆ :  ರಾಜ್ಯಾದ್ಯಂತ ಟ್ರಾನ್ಸ್ ಫಾರ್ಮರ್ಗಳ ಅಭಿಯಾನವನ್ನು ಹಮ್ಮಿಕೊಂಡಿದ್ದು ಈಗಾಗಲೇ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಚಾಲನೆ ನೀಡಿದ್ದಾರೆ.
ಬೆಸ್ಕಾಂ ಇಲಾಖೆಯ ಅಧಿಕಾರಿಗಳು  ಟ್ರಾನ್ಸ್ ಫಾರ್ಮರ್ಗಳ ಅಭಿಯಾನ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ನ್ಯೂನ್ಯತೆ ಹೊಂದಿರುವ ಹಾಗೂ ಅಸಮರ್ಪಕ  ಗ್ರೌಂಡಿಂಗ್ ಸಮಸ್ಯೆ ಹೊಂದಿರುವ ಟ್ರಾನ್ಸ್ ಫಾರ್ಮರ್ ಗಳನ್ನು ನಿರ್ವಹಣೆ ಕಾರ್ಯವನ್ನು ಮಾಡುತ್ತಿದ್ದಾರೆ.
ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯ ಗುರಿಯನ್ನು ಎಲ್ಲಾ ಎಸ್ಕಾಂಗಳಿಗೆ ನೀಡಲಾಗಿದೆ. ಬೆಸ್ಕಾಂ ಇಲಾಖೆಯು ತನ್ನ ವ್ಯಾಪ್ತಿಗೆ ಬರುವ 8 ಜಿಲ್ಲೆಗಳಲ್ಲಿ ದುರಸ್ಥಿ ಸ್ಥಿತಿಯಲ್ಲಿರುವ ಟ್ರಾನ್ಸ್ಫಾರ್ಮರ್ಗಳ ನಿರ್ವಹಣೆಯನ್ನು ಕಳೆದ ಎರಡು ತಿಂಗಳಿನಿಂದ ನಿರ್ವಹಿಸಲಾಗುತ್ತಿದೆ.
ಮೇ ತಿಂಗಳಿಂದ ಜುಲೈ 12 ರವರೆಗೆ ನಿರ್ವಹಣೆ ಮಾಡಿರುವ ಒಟ್ಟು 27,787 ಟ್ರಾನ್ಸ್ ಫಾರ್ಮರ್ ಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ 9524 ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯನ್ನು ಬೆಸ್ಕಾಂ ಮಾಡಿದೆ. ತುಮಕೂರು ಜಿಲ್ಲೆ- 5232, ದಾವಣಗೆರೆ ಜಿಲ್ಲೆ- 2906, ಚಿತ್ರದುರ್ಗ- 2291, ಚಿಕ್ಕಬಳ್ಳಾಪುರ ಜಿಲ್ಲೆ- 2646, ರಾಮನಗರ ಜಿಲ್ಲೆ- 2372 ಮತ್ತು ಕೋಲಾರ ಜಿಲ್ಲೆಯಲ್ಲಿ 1429  ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯನ್ನು ಬೆಸ್ಕಾಂ ಪೂರ್ಣಗೊಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ವಹಣೆ ಮಾಡಿರುವ 9524 ಟ್ರಾನ್ಸ್ ಫಾರ್ಮರ್ ಗಳ ಪೈಕಿ ಬೆಸ್ಕಾಂನ  ದಕ್ಷಿಣ ವೃತ್ತ- 2713, ಪಶ್ಚಿಮ ವೃತ್ತ- 2253, ಪೂರ್ವ ವೃತ್ತ- 1961 ಮತ್ತು ಉತ್ತರ ವೃತ್ತದಲ್ಲಿ 1946  ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ ಮಾಡಲಾಗಿದೆ.
ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಹಾಗೂ ಜನ ನಿಬಿಢ ಪ್ರದೇಶಗಳಲ್ಲಿರುವ ಟ್ರಾನ್ಸ್ ಫಾರ್ಮರ್ಗಳ ಸಮಗ್ರ ನಿರ್ವಹಣೆಗೆ ಬೆಸ್ಕಾಂ ಕ್ರಮ ಕೈಗೊಂಡಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Recent Articles

spot_img

Related Stories

Share via
Copy link
Powered by Social Snap