ರೈಲಿನಿಂದ ಬಿದ್ದು ಯುವಕನ ಸಾವು!!!

ಕಾಸರಗೋಡು:

      ಮುಂಬೈಯಿಂದ ಕಾಸರಗೋಡಿಗೆ ಹೋಗುತ್ತಿದ್ದ ರೈಲಿನಿಂದ ಬಿದ್ದು ಕಾಸರಗೋಡಿನ ಯುವಕನೋರ್ವ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

      ಬೇಕಲಪಳ್ಳಿಕೆರೆ ಚೇಟುಕುಂಡುವಿನ ನಿತೀಶ್ (26) ಮೃತ ದುರ್ದೈವಿ. ರೈಲ್ವೆ ಹಳಿ ಪಕ್ಕ ಮೃತದೇಹ ಪತ್ತೆಯಾಗಿದ್ದು, ಪರ್ಸ್ ನಲ್ಲಿ ಲಭಿಸಿದ ಗುರುತು ಚೀಟಿಯಿಂದ ಗುರುತು ಪತ್ತೆಯಾಗಿದೆ ಎಂದು ಗೋವಾ ಪೊಲೀಸರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.

       ಕಳೆದ 3 ವರ್ಷಗಳಿಂದ ಗೋವಾದಲ್ಲಿ ಮಳಿಗೆಯೊಂದರಲ್ಲಿ ದುಡಿಯುತ್ತಿದ್ದ ನಿತೀಶ್ ಮನೆಗೆ ಮರಳುತ್ತಿದ್ದಾಗ ದುರಂತ ನಡೆದಿದೆ. ಸೋಮವಾರ ಮನೆಗೆ ತಲಪುವುದಾಗಿ ಮನೆಯವರಿಗೆ ಕರೆ ಮಾಡಿದ್ದು, ರೈಲಿಂದ ಆಕಸ್ಮಿಕವಾಗಿ ಹೊರಬಿದ್ದು ದುರಂತ ನಡೆದಿರಬಹುದು ಎಂದು ಶಂಕಿಸಲಾಗಿದೆ.

      ಮಾಹಿತಿ ತಿಳಿದು ಸಂಬಂಧಿಕರು ಗೋವಾಕ್ಕೆ ತೆರಳಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಊರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap