ಲಿಂಗಾಯತರು ಬಿಜೆಪಿಗೆ ಸೀಮಿತವಲ್ಲ…!

ತುರುವೇಕೆರೆ:

   ತಾಲೂಕಿನ ವೀರಶೈವ ಲಿಂಗಾಯಿತ ಬಾಂದವರು ಕೇವಲ ಬಿಜೆಪಿ ಒಂದೇ ಪಕ್ಷಕ್ಕೇ ಸೀಮಿತವಾಗಿಲ್ಲ ಎಂದು ಕಾಂಗ್ರೇಸ್‌ನ ಮುಖಂಡ ಮಾಸ್ತಿಗೊಂಡನಹಳ್ಳಿ ದೇವರಾಜು ತಿಳಿಸಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಸಮ್ಮೂಕದಲ್ಲಿ ಹಲವು ವೀರಶೈವ ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಲವು ಬಿಜೆಪಿ ಮುಖಂಡರು ತಮ್ಮ ಸ್ವಾರ್ಥ ಸಾದನೆಗಾಗಿ ವೀರಶೈವ ಲಿಂಗಾಯಿತರು ಎಂದೆAದೂ ಬಿಜೆಪಿ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂಬ ಸುದ್ದಿ ಹಬ್ಬಿಸಿ ಲಿಂಗಾಯಿತರು ಎಂಬ ಹಣೆ ಪಟ್ಟಿಯನ್ನು ಕಟ್ಟಿದ್ದಾರೆ.

    ಕಾಂಗ್ರೇಸ್ ಪಕ್ಷದಲ್ಲಿ ಅತೀ ಹೆಚ್ಚು ವೀರಶೈವ ಲಿಂಗಾಯಿತ ಶಾಸಕರು, ಸಂಸದರು ಸೇರಿ ಹಲವು ಮುಖಂಡರು ಇದ್ದಾರೆ. ತಾಲೂಕಿನಲ್ಲಿಯೂ ಸಹ ಹಲವು ಮುಖಂಡರು ಕಾಂಗ್ರೇಸ್ ಪಕ್ಷದಲ್ಲಿ ದುಡಿಯುತ್ತಿದ್ದು ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ.

    ಇನ್ನು ಕೆಲವು ದಿನಗಳಲ್ಲಿ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ಪಕ್ಷದಲ್ಲಿದ್ದ ಹಲವು ವೀರಶೈವ ಲಿಂಗಾಯಿತ ಮುಖಂಡರು ಅಪಾರ ಪ್ರಮಾಣದಲ್ಲಿ ಕಾಂಗ್ರೇಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಬೆಮೆಲ್ ಕಾಂತರಾಜು ಗೆಲ್ಲಿಸುತ್ತೇವೆ ಎಂದರು.

   ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ ರಾಜ್ಯದ ಜನರು ಡಬ್ಬಲ್ ಇಂಜಿನ್ ಸರ್ಕಾರದ ಆಡಳಿತ ಬ್ರಷ್ಟಚಾರವನ್ನು ಜನರು ನೋಡಿ ಸಾಕಾಗಿದೆ. ಈಬಾರಿ ನೂರಕ್ಕೆ ನೂರರೊಷ್ಟು ಕಾಂಗ್ರೇಸ್ ಸರ್ಕಾರ ಬರಲಿದೆ. ಈಗಾಗಲೇ ಬಿಜೆಪಿ, ಜೆಡಿಎಸ್ ಪಕ್ಷದ ಹಲವು ಶಾಸಕರು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಜಿಲ್ಲೆ ತಾಲೂಕಿನಲ್ಲಿ ಯಲ್ಲಿಯೂ ಕಾಂಗ್ರೇಸ್ ಪಕ್ಷ ಸದೃಡವಾಗಿದ್ದು ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲವು ಸಾದಿಸಲಿದ್ದೇವೆ ಎಂದರು.

    ಈ ಸಂದರ್ಬದಲ್ಲಿ ಹಲವು ಕಲ್ಲಹಳ್ಳಿ, ಯಲದಬಾಗಿ, ಲೀಕಮ್ಮನಹಳ್ಳಿ, ಲಕ್ಕಸಂದ್ರ, ಗೋವಿನಘಟ್ಟ, ಸೋಪ್ಪನಹಳ್ಳಿ, ತಾಳಕೆರೆ, ಒಬ್ಬೇನಾಗಸಂದ್ರ, ಕೆ.ಕೊಪ್ಪ, ರಾಯಸಂದ್ರ, ವಿಶ್ವನಾಥಪುರ, ದೊಂಬರನಹಳ್ಳಿ, ಹಡವನಹಳ್ಳಿ, ಚಿಕ್ಕಮಲ್ಲಿಗೆರೆ, ರಾಮಡಿಹಳ್ಳಿ, ಕೋಳಘಟ್ಟ, ವೆಂಕಾಟಪುರ, ಸಂಪಿಗೆ, ಮಾಸ್ತಿಗೊಂಡನಹಳ್ಳಿ, ಎನ್.ಮಾವಿನಹಳ್ಳಿ ಗ್ರಾಮದ ನೂರಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಧ ಪ್ರಸನ್ನಕುಮಾರ್, ನಾಗೇಶ್ ಮುಖಂಡರಾದ ಕಲ್ಲಹಳ್ಳಿಮಹಾಲಿಂಗಯ್ಯ, ಅರಳಿಕೆರೆಉದಯ್ ಕುಮಾರ್, ಬೇವೀನಹಳ್ಳಿಬಸವರಾಜು,  ಕಾಚಿಹಳ್ಳಿ ಶಿವಕುಮಾರ್, ರುದ್ರೇಶ್, ಸಿದ್ದೇಶ್, ರೇಣುಕಯ್ಯ, ನಂಧೀಶ್, ಸ್ವಾಮಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap