ಬುಕ್ಕಾಪಟ್ಟಣ
ಬುಕ್ಕಾಪಟ್ಟಣ ಗ್ರಾಮದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ 2018-19 ನೇ ಸಾಲಿನ ಪ್ರಥಮ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಎನ್.ಎಸ್.ಎಸ್, ಕ್ರೀಡೆ, ರೆಡ್‍ಕ್ರಾಸ್ ಮತ್ತು ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ನಡೆಸಲಾಯಿತು. ಬುಕ್ಕಾಪಟ್ಟಣ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ಕಾಲೇಜು ಅಭಿವೃಧ್ದಿÀ ಸಮಿತಿ ಸದಸ್ಯರಾದ ಬಿ.ಸಿ.ಜಯಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತಿಯನ್ನು ಸಾಧಿಸಲು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬುಕ್ಕಾಪಟ್ಟಣ ಆಕ್ಸ್‍ಫರ್ಡ್ ವಿದ್ಯಾಸಂಸ್ಥೆಯ ಸಂಸ್ಥಾಪಕ ದೊಡ್ಡಸಿದ್ದಯ್ಯ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಶ್ರಮಪಟ್ಟರೆ ಸಾಧನೆ ಸಿದ್ದಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಆರ್.ರೇವಣಸಿದ್ದೇಶ್ವರ ಮಾತನಾಡಿ ವಿದ್ಯಾರ್ಥಿಗಳು ಕೊಡಗು ಮಳೆ ಸಂತ್ರಸ್ತರಿಗೆ ಹಣ ಸಂಗ್ರಹಿಸುವ ಮನೋಭಾವವನ್ನು ಪ್ರಶಂಸಿಸಿ, ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ಜಲವಾಗಲೆಂದು ಹಾರೈಸಿದರು. ಕಾರ್ಯಕ್ರಮದ ಮೊದಲು ದಿವಂಗತ ಅಟಲ್ ಬಿಹಾರಿ ವಾಜಪೇಯಿರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜೊತೆಗೆ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಈರಪ್ಪನಾಯಕ, ಡಾ.ಭಾನುಪ್ರಕಾಶ್, ಪ್ರೊ.ಲೋಕೇಶ್, ಡಾ.ಯೇಸುದಾಸ್ ಮತ್ತು ಇತರೆ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೆ ತಯಾರಿಸಿದ ಆಹಾರವನ್ನು ಸಾಮೂಹಿಕ ಭೋಜನ ನಡೆಸಲಾಯಿತು.
