ಹರಪನಹಳ್ಳಿ :
ಕಡತಿ ಗ್ರಾಮದಲ್ಲಿ ಹೊಳೆ ಗಂಗಮ್ಮ ದೇವಸ್ಥಾನ ಮುಳುಗಡೆಯಾಗಿದ್ದು, ಈಶ್ವರಿ ದೇವಾಲಯದವರೆಗೂ ನೀರು ಬಂದಿದೆ. ಹರಪನಹಳ್ಳಿ ಭೂಕಾಂತಪ್ಪ ಅವರ ಮನೆಗೂ ನೀರು ನುಗ್ಗಿದೆ. ಗ್ರಾಮದ ನೂರಾರು ಎಕರೆ ಭತ್ತದ ಗದ್ದೆಗಳ ಜಲಾವೃತಗೊಂಡಿದ್ದು, ವಿದ್ಯುತ್ ಕಂಬ, ಟ್ರಾನ್ಸಫಾರ್ಮರ್ ಕಂಬಗಳು ಜಲಾವೃತಗೊಂಡಿದೆ. ಹೊಲ, ಗದ್ದೆಗಳಲ್ಲಿ ನೀರಿನ ರಭಸಕ್ಕೆ ಮೇರೆಗಳು ಹೊಡೆದು ನೀರು ನುಗ್ಗುತ್ತಿದೆ ಎಂದು ಯುವ ಮುಖಂಡ ಮಂಜುನಾಥ್ ತಿಳಿಸಿದ್ದಾರೆ.
ಕಡತಿಯಲ್ಲಿ ಹೊಳೆಗಂಗಮ್ಮ ದೇವಸ್ಥಾನ ಮುಳುಗಡೆ. ಕಡತಿಯಲ್ಲಿ ನಾಟಿ ಮಾಡಲಾಗಿದ್ದ ಗದ್ದೆಗಳು ಸಂಪೂರ್ಣ ಜಲಾವೃತ
ಕಡತಿ ಗ್ರಾಮದಲ್ಲಿ ಜಲಾವೃತಗೊಂಡ ಗದ್ದೆಯಲ್ಲಿ ವಿದ್ಯುತ್ ಪರಿವರ್ತಕ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
