ವೃತ್ತಿ ಜೀವನ ಪರ್ಯಂತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ನಿವೃತ್ತ ಶಿಕ್ಷಕ ಬಂಧನ

ತಿರುವನಂತಪುರಂ:

ತನ್ನ ವೃತ್ತಿ ಜೀವನಾದ್ಯಂತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ ಮೇಲೆ ನಿವೃತ್ತ ಶಿಕ್ಷಕನೊಬ್ಬನ್ನು ಬಂಧಿಸಲಾಗಿದೆ. ಮಲ್ಲಪ್ಪುರಂ ಸೆಂಟ್‌ ಜೆಮ್ಮಾಸ್‌ ಬಾಲಕಿಯರ ಫ್ರೌಢಶಾಲೆಯ ನಿವೃತ್ತ ಶಿಕ್ಷಕ ಹಾಗೂ ಮಲಪ್ಪುರಂ ಪುರಸಭೆಯ ಸದಸ್ಯನೂ ಆಗಿರುವ ಕೆ.ವಿ. ಶಶಿಕುಮಾರ್‍‌ ಎಂಬಾತನೇ ಬಂಧಿತ ಶಿಕ್ಷಕ.
30 ವರ್ಷಗಳ ತನ್ನ ಶಿಕ್ಷಕ ವೃತ್ತಿ ಜೀವನದಲ್ಲಿ ಸುಮಾರು 60 ವಿದ್ಯಾರ್ಥಿಯನಿರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಶಿಕ್ಷಕ, ಪುರಸಭೆಯ ಸದಸ್ಯನೂ ಆಗಿರುವ ಶಶಿಕುಮಾರ್‍‌ ಎದುರಿಸುತ್ತಿದ್ದು, ಸದ್ಯ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೇರಳ ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ಅವರು, “ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ಹಾಗೂ ಸೆಂಟ್‌ ಜೆಮ್ಮಾಸ್‌ ಶಾಲೆಯ ಆಡಳಿತ ಮಂಡಳಿ ವೈಫಲ್ಯದ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ,” ಎಂದು ತಿಳಿಸಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಶಿಕ್ಷಕ ಶಶಿಕುಮಾರ್‍‌ ವಿರುದ್ಧ ಮಲಪ್ಪುರಂ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸದರಿ ಶಿಕ್ಷಕ ನಾಪತ್ತೆಯಾಗಿದ್ದನು. ಒಂದು ವಾರದ ಹುಡುಕಾಟದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸುಮಾರು 60 ವಿದ್ಯಾರ್ಥಿನಿಯರು ಶಿಕ್ಷಕ ಶಶಿಕುಮಾರ್‍‌ ಅವರು ತಮ್ಮ ವೃತ್ತಿಯ ಅವಧಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. ಶಶಿಕುಮಾರ್‍‌ ಸಿಪಿಎಂನ ನಾಯಕನಾಗಿದ್ದು, ಮಲಪ್ಪುರಂ ಪುರಸಭೆಗೆ ಮೂರು ಬಾರಿ ಸದಸ್ಯನಾಗಿ ಚುನಾಯಿತನಾಗಿದ್ದ.

2022ರ ಮಾಚ್‌ನಲ್ಲಷ್ಟೇ ನಿವೃತ್ತನಾಗಿದ್ದನು. ತಾನು ನಿವೃತ್ತನಾಗುತ್ತಿದ್ದೇನೆ ಎಂದು ಪೇಸ್‌ಬುಕ್‌ನಲ್ಲಿ ಬರೆದುಕೊಂಡ ನಂತರ ಹಳೆ ವಿದ್ಯಾರ್ಥಿನಿಯರ ಸಂಘ ಈ ಆರೋಪ ಮಾಡಲಾಗಿದೆ ಎನ್ನಲಾಗಿದೆ.

ತನ್ನ ಬಗ್ಗೆ ದುರು ದಾಖಲಾದ ನಂತರ ಶಶಿಕುಮಾರ್‍‌ ಪುರಸಭೆಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ. 2019ರಲ್ಲೇ ಹಲವು ಶಾಲೆಯ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡರಿಲಿಲ್ಲ. ನಂತರ ಹಳೆ ವಿದ್ಯಾರ್ಥಿನಿಯರ ಸಂಘ ಮಲಪ್ಪುರಂ ಜಿಲ್ಲಾ ಎಸ್‌ಪಿಗೆ ದೂರು ನೀಡಿತ್ತು. ವಿಚಾರ ಹೆಚ್ಚು ಚರ್ಚೆ ಆರಂಭವಾಗುತ್ತಿದ್ದಂತೆ ಶಶಿಕುಮಾರ್‍‌ ನನ್ನು ಸಿಪಿಎಂ ಪಕ್ಷದಿಂದ ಉಚ್ಚಾಟಿಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link