ಬೆಂಗಳೂರು
ಸರಗಳ್ಳತನಗಳೆ ಜಾಸ್ತಿಯಾಗಿರುವ ಈ ದಿನ ಗಳಲ್ಲಿ ಅಂತಹ ಕೃತ್ಯಕ್ಕೆ ಕೈ ಹಾಕಿದ ಕೀಚಕನ ಕಿರುಬೆರಳನ್ನು ಠಾಣೆಗೆ ತೆಗೆದುಕೊಂಡು ಬಂದ ಮಹಿಳೆಯೊಬ್ಬರು ದೂರು ನೀಡಿದ ಘಟನೆ ನಗರದಲ್ಲಿ ನಡೆದಿದೆ. ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರು ಬಂದರು ಆದರೆ ಅವರ ಕೈಯಲ್ಲಿ ಒಂದು ಅರ್ಧ ತುಂಡಾದ ಕೈಬೆರಳು ಇರುವುದನ್ನು ನೋಡಿದ ಪೊಲೀಸರು ಒಂದು ಕ್ಷಣಕ್ಕೆ ದಂಗಾಗಿದ್ದರು .ಆ ಮಹಿಳೆಯ ಧೈರ್ಯ ಕಂಡು ಇದ್ದರೆ ಈ ಮಹಿಳೆಯ ರೀತಿ ಇರಬೇಕು ಎಂದು ಹೊಗಳಿದ್ದಾರೆ ಎಂದು ಮುಲಗಳು ತಿಳಿಸಿವೆ.