ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು

0
29

ಹಾವೇರಿ :

        ನಗರದ ಬಹುಜನ ಸಮಾಜ ಪಾರ್ಟಿಯ ಕಚೇರಿಯಲ್ಲಿ ಮಾನ್ಯವರ್ ಕಾನ್ಸಿರಾಮ್‍ಜೀ ಅವರ 12 ನೇ ವರ್ಷದ ಮಹಾ ಪರಿನಿಬ್ಬಾಣ ಸ್ಮರಣಾರ್ಥ ಬಹುಜನ ಸಂಕಲ್ಪ ದಿನ ಆಚರಿಸಲಾಯಿತು. ಈ ಸಂಕಲ್ಪ ದಿನ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣವರ ದೇಶದಲ್ಲಿ ದಿನ,ದಲಿತರ ಹಾಗೂ ಹಿಂದುಳಿದವರ ಪರವಾಗಿ ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ಕಾನ್ಸಿರಾಮ್‍ಜೀಯವರು ಸತತ ಹೋರಾಟ ಮಾಡಿದವರು. ದುಡಿಯುವ ವರ್ಗದ ಪರವಾಗಿ ಎಲ್ಲರಿಗೂ ಸಮಾನ ಹಕ್ಕು ನೀಡಬೇಕು.

        ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದ ಅಡಿ ಸಮಾಜದ ಜನರಿಗೆ ಬದುಕಿನ ಸಂದೇಶ ನೀಡಿದವರಾಗಿ ಹಾಗೂ ಹೋರಾಟದ ಮಾರ್ಗದಿಂದ ನ್ಯಾಯ ಪಡೆಯುವಂತಾಗಬೇಕು ಎಂದು ನಂಬಿದವರು. ಇಂದು ಅವರು ನಮ್ಮನ್ನು ಅಗಲಿ 12 ವರ್ಷ ಕಳಿದಿವೆ.

         ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು, ಅವರ ಈ ದಿನವನ್ನು ಬಹುಜನ ಸಂಕಲ್ಪ ದಿನವಾಗಿ ಆಚರಿಸುವ ಮೂಲಕ ಅವರ ಕೊಡುಗೆ ಹಾಗೂ ಜೀವನದಾರಿ ತಿಳಿದುಕೊಳ್ಳುವ ಪ್ರಯತ್ನಶೀಲವಾದ ಕಾರ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಂಕೆ ಮಖಬೂಲ್.ಆರ್ ಎ ಸಾಲಿಮಠ. ವಿಜಯಕುಮಾರ ವಿರಕ್ತಮಠ.ಎಂ ಎ ಉನಗೋಡಿಮಠ. ವೀರೇಶ ಕೆರೂಡಿ.ಅಬ್ದುಲ್ ಖಾದರ ಧಾರವಾಡ.ಗೌಸ ಕತ್ತಿಬ್.ಲೋಕೇಶ್ ಕಿವಡರ.ರಘು ಮಾಳಗಿ. ಕಲಂದರ ಮುಲ್ಲಾ.ಜಲಾನಿ.ಸುರೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here