ಹೊಸ ಬಾಸುಮತಿ ಅಕ್ಕಿ ತಳಿಗೆ ವಿರೋಧ….!

ನವದೆಹಲಿ:

     ಭಾರತದ ಪ್ರಮುಖ ಸಂಶೋಧನಾ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಕಳೆನಾಶಕ-ಸಹಿಷ್ಣು  ಆರೊಮ್ಯಾಟಿಕ್ ಅಕ್ಕಿಯನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಿದೆ.

     ಐಸಿಎಆರ್ ಬಿಡುಗಡೆ ಮಾಡಿರುವ ಎರಡು ಪ್ರತ್ಯೇಕ ತಳಿಗಳ ಭತ್ತವನ್ನು ಕಡಮೆ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾಗಿದ್ದು, ಗ್ರೀನ್ ಹೌಸ್ ಅನಿಲಗಳಾದ ಮೀಥೇನ್ ನ್ನು ಕಡಿಮೆ ಮಾಡಿ ಅಕ್ಕಿಯ ಇಳುವರಿ ಹೆಚ್ಚಾಗಲಿದೆ.

    ನೇಪಾಳ ಸೇರಿ ಏಳು ದೇಶಗಳಿಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

ಹೊಸ ಎರಡು ವಿಧದ ಬಾಸ್ಮತಿ ಅಕ್ಕಿ ಪುಸ ಬಾಸ್ಮತಿ 1979 ಹಾಗೂ ಪುಸ ಬಾಸ್ಮತಿ 1985 ತಳೀಯವಾಗಿ ಮಾರ್ಪಡಿಸದ   ಅಕ್ಕಿಯ ಪ್ರಭೇದಗಳಾಗಿದ್ದು, ಮೂರು ವರ್ಷಗಳ ಕಾಲ ಪ್ರಯೋಗ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಇದು ಈಗಿರುವ ಪುಸ ಬಾಸ್ಮತಿ 1121 ಹಾಗೂ ಪುಸ ಬಾಸ್ಮತಿ 1509 ಅಕ್ಕಿಯ ಸುಧಾರಿತ ಆವೃತ್ತಿಗಳಾಗಿವೆ.

    ಹೊಸ ಪ್ರಭೇದಗಳು ಇಮಾಜೆಥಪೈರ್‌ನಂತಹ ಸಸ್ಯನಾಶಕಗಳನ್ನು ನೇರವಾಗಿ ಅನ್ವಯಿಸಲು ಅನುವು ಮಾಡಿಕೊಡುತ್ತದೆ, ಈ ಪ್ರಭೇದಗಳು ರೂಪಾಂತರಿತ ALS ಜೀನ್ ಅನ್ನು ಹೊಂದಿದ್ದು, ಕೆಲವು ಪ್ರಬಲವಾದ ಕಳೆಗಳನ್ನು ನಿರ್ಮೂಲನೆ ಮಾಡುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap