ನವದೆಹಲಿ :
ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ವಂಚಕರು ಹೊಸ ರೀತಿಯಲ್ಲಿ ಜನರನ್ನ ಮೋಸಗೊಳಿಸಲು ಯತ್ನಿಸುತ್ತಿದ್ದಾರೆ. ಸಧ್ಯ ಕೊರೊನಾದ 3ನೇ ಅಲೆಯಲ್ಲಿ, ಸೈಬರ್ ದರೋಡೆಕೋರರು ಬೂಸ್ಟರ್ ಡೋಸ್ ಹೆಸರಿನಲ್ಲಿ ಮೋಸ ಮಾಡಲು ಪ್ರಾರಂಭಿಸಿದ್ದಾರೆ.
ಬೂಸ್ಟರ್ ಡೋಸ್ ಕೊಡಿಸುವ ಹೆಸರಿನಲ್ಲಿ ಪುಂಡರು ಜನರನ್ನ ಬಲಿಪಶುಗಳನ್ನಾಗಿಸಲು ಮಾಡುತ್ತಿದ್ದಾರೆ. ಅವ್ರು ಬೂಸ್ಟರ್ ಡೋಸ್ಗಾಗಿ ನೋಂದಾಯಿಸುವ ನೆಪದಲ್ಲಿ ಜನರಿಗೆ ಕರೆ ಮಾಡಿ OTP ಸಂಖ್ಯೆಗಳನ್ನ ಕೇಳುತ್ತಾರೆ ಮತ್ತು ಅದರ ಮೂಲಕ ಅವ್ರು ತಮ್ಮ ಬ್ಯಾಂಕ್ ಖಾತೆಗಳನ್ನ ಖಾಲಿ ಮಾಡುತ್ತಾರೆ.
ಹೇಗೆ ಮೋಸಗೊಳಿಸಲಾಗುತ್ತೆ?
ನಿಮ್ಮ ಮೊಬೈಲ್ಗೆ ಕರೆ ಮಾಡುವ ವಂಚಕರು, ನೀವು ಎರಡೂ ಲಸಿಕೆಗಳನ್ನ ಪಡೆದಿದ್ದೀರಾ? ಅಂತಾ ಪ್ರಶ್ನಿಸುತ್ತಾರೆ. ನೀವು ಹೌದು ಅಂದಿದ್ದೇ ಆದ್ರೆ, ನೀವು ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ನಾನು ನಿಮ್ಮನ್ನ ನೋಂದಾಯಿಸುತ್ತಿದ್ದೇನೆ.
ಒಟಿಪಿ ಬರುತ್ತೆ, ಅದನ್ನ ನನಗೆ ತಿಳಿಸಿ ಎನ್ನುತ್ತಾರೆ. ನೀವು ನಿಮ್ಮ OTP ತಿಳಿಸಿದ ತಕ್ಷಣ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ತೆರವುಗೊಳಿಸಲಾಗುತ್ತೆ. ಹಾಗಾಗಿ ನಿಮಗೆ ಬೂಸ್ಟರ್ ಡೋಸ್ ಹೆಸ್ರಲ್ಲಿ ಒಟಿಪಿ ಬಂದ್ರೆ, ನೀವು ಎಚ್ಚರವಾಗಿರಿ.
