ಹೊನ್ನಾಳಿ :
ಚದುರಂಗ ಎಂದರೆ ಎರಡು ಕಲ್ಪಾನಿಕ ಸೈನ್ಯಗಳ ನಡುವೆ ನಡೆಯುವ ಯುದ್ಧದ ಆಟ. ಚದುರಂಗದ ಮನೆಯೇ ಒಂದು ಯುದ್ಧ ರಂಗ, ಅದರ ಕಾಯಿಗಳೇ ಸೈನ್ಯ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಎಂ.ಎಸ್. ರಾಜಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಚದುರಂಗ ಪಂದ್ಯಾವಳಿ ಹಾಗೂ ವಿಶ್ವವಿದ್ಯಾನಿಲಯ ತಂಡದ ಆಯ್ಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ದೇಶಕಟ್ಟುವ ಕೆಲಸದಲ್ಲಿ ನಿರತವಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿದ್ದು, ಅದನ್ನು ತೋರ್ಪಡಿಸಲು ಕಾಲೇಜು ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಅವಕಾಶÀಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ಎಸ್. ಹರೀಶ ಪ್ರಾಸ್ತಾವಿಕ ಮಾತನಾಡಿ ಈ ಪಂದ್ಯಾವಳಿಯಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಸುಮಾರು 180 ಜನ ವಿದ್ಯಾರ್ಥಿಗಳು ಅದರಲ್ಲಿ 18 ಪುರುಷ ತಂಡ ಮತ್ತು 11 ಮಹಿಳಾ ತಂಡ ಭಾಗವಹಿಸಿವೆ ಎಂದು ಹೇಳಿದರು. ಚದುರಂಗ ಆಟವು ಸುಮಾರು ಕ್ರಿ.ಶ. 600ರಲ್ಲಿ ಭಾರತದಲ್ಲಿ ಹುಟ್ಟಿದ ಆಟ ಇದಾಗಿದೆ. ಚದುರಂಗ ಎಂದರೆ 4 ಅಂಗಗಳು ಚತುರ್+ಅಂಗ=ಚದುರಂಗ=ಎಂದರ್ಥ. ಸೈನ್ಯದ ನಾಲ್ಕು ಅಂಗಗಳಾದ ರಥ, ಕುದುರೆ, ಆನೆ ಮತ್ತು ಪದಾತಿಗಳನ್ನು ಇದು ಸೂಚಿಸುತ್ತದೆ. ಚದುರಂಗವು ಜಾಣ್ಮೆಯ ಆಟವಾಗಿದೆ ಮತ್ತು ಕಲ್ಪನಾಶಕ್ತಿ ಸಮಗ್ರದೃಷ್ಟಿ ಏಕಾಗ್ರತೆಗಳು ಆಟಗಾರರನ್ನು ಗೆಲ್ಲಿಸುತ್ತವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
