ಅಕ್ರಮ ಮದ್ಯಪಾನ ಮಾರಾಟ ನಿಷೇಧ ಮಾಡಿ ಕಾರ್ಯಕ್ರಮ

ಬರಗೂರು :

       ಮದ್ಯಪಾನ ಚಟ ಸಂಸಾರ ಬೀದಿಗೆ ಬಿಳುವಂತೆ ಮಾಡುತ್ತೆ, ನಿತ್ಯ ಕಷ್ಟ ಪಟ್ಟು ದುಡಿವಂತ ಹಣ ಕುಡಿತದಕ್ಕೆ ಬಳಸದೆ ಮಕ್ಕಳ ಶಿಕ್ಷಣ ಮತ್ತು ಮನೆಯಲ್ಲಿ ಮಡದಿಗೆ ನೀಡಿ ಸಂಸಾರ ನಿರ್ವಹಣೆಗೆ ಬಳಸಿದರೆ ನೆಮ್ಮದಿ ಜೀವನದ ಜೊತೆಗೆ ಸಮಾಜದಲ್ಲಿ ಗೌರವಯುತವಾದ ಮನುಷ್ಯರಾಗಿ ಬದುಕ ಬಹುದೆಂದು ಪಿಎಸ್‍ಐ ವಿ.ನಿರ್ಮಲ ಸಲಹೆ ನೀಡಿದರು.

        ಸಿರಾ ತಾಲೂಕು ಬರಗೂರು ಸಮೀಪದ ಮುಸುಗಲೋಟಿ ಗ್ರಾಮದ ದಲಿತ ಕಾಲೂನಿಯಲ್ಲಿ ಬುಧವಾರ ರಾತ್ರಿ ಗ್ರಾಮದ ಮಹಿಳೆಯರು ಆಯೋಜಿಸಿದ್ದ ಗ್ರಾಮದಲ್ಲಿ ಅಕ್ರಮ ಮದ್ಯಪಾನ ಮಾರಾಟ ನಿಷೇಧ’ ಮಾಡಿ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.

        ಕಣ್ಣೀರು ಹಾಕುತ್ತ ಪೋಲೀಸರಲ್ಲಿ ಮನವಿ ಮಾಡಿ ಕೊಂಡ ದಲಿತ ಮಹಿಳೆ ಪಾತಮ್ಮ ನನ್ನ ಗಂಡ ಕುಡುಕ ನಿತ್ಯ ಕುಡಿದು ಅವಚ್ಯ ಪದಗಳಿಂದ ನಿಂಧಿಸುತ್ತಾನೆ, ಕುಡಿಯ ಬೇಡ ಎಂದು ಬುದ್ದಿ ಹೇಳಿದಕ್ಕೆ ಒಂದು ದಿನ ನನಗೆ ಮನೆಯಿಂದ ತಳ್ಳಿ ಬೀಗ ಹಾಕಿದ್ದಾನೆ ದಯವಿಟ್ಟು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಗೊಗರೆದ ಮಹಿಳೆಯ ನೋವಿಗೆ ಸ್ಪಂಧಿಸಿ ಪಿಎಸೈ ನಿರ್ಮಲ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸುವುದರ ಜೊತೆಗೆ, ಹೆಂಡತಿ ಮಕ್ಕಳಿಗೆ ಕುಡಿದು ಕಿರುಕುಳ ನೀಡಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

         ಹುಲಿಕುಂಟೆ ತಾಪಂ ಸದಸ್ಯೆ ವಸುಧ ತಿಪ್ಪೇಶ್‍ಗೌಡ ಮಾತನಾಡಿ ಮುಸುಗಲೊಟಿ ಗ್ರಾಮದ ಮಹಿಳೆಯರ ನೆಮ್ಮದಿ ಜೀವನಕ್ಕೆ ಕಂಟಕವಾಗಿರುವ ಅಕ್ರಮ ಮದ್ಯ ಮಾರಾಟ ನಿಷೇಧ ಮಾಡ ಬೇಕು. ಒಂದು ಭಾರಿ ಎಚ್ಚರ ನೀಡಿ ಮತ್ತೆ ಮರುಕಳಿಸಿದರೆ ಪೋಲೀಸರು ನಿರ್ಧಕ್ಷಿಣ್ಯವಾಗಿ ಕ್ರಮ ಜರಗಿಸ ಬೇಕು. ಮಹಿಳೆಯರಲ್ಲಿ ಸಂಘಟನಾ ಸಾರ್ಮಥ್ಯವಿದ್ದು, ಒಗ್ಗಟ್ಟಿನಿಂದ ಹೋರಾಟ ಮಾಡಿ ಮದ್ಯಪಾನ ಮುಕ್ತ ಗ್ರಾಮ ಮಾಡುವ ಸಂಕಲ್ಪ ಮಾಡ ಬೇಕಿದೆ ಎಂದರು.

          ಮಾಜಿ ಗ್ರಾಮ ಅಧ್ಯಕ್ಷೆ ಮಂಜುಳಾ ಭೋತೇಶ್, ಮುಖಂಡ ತಿಪ್ಪೇಗೌಡ, ಎಎಸ್‍ಐ ದ್ರುವಚಾರ್ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ