ಬಳ್ಳಾರಿ:
ನಿನ್ನೆ ತೋಳಮಾಮಿಡಿ ಗ್ರಾಮದಲ್ಲಿ ಅಕ್ರಮ ಮರಳು ಹಿಡಿಯಲು ಹೋಗಿ ಒಂದು ಟ್ರ್ಯಾಕ್ಟರ್ ಅನ್ನು ಹಿಡಿದು ನಂತರ ಉದ್ರಿಕ್ತ ವಾತಾವರಣ ಉಂಟಾಗಿ ತೋಳಮಾಮಿಡಿ ಗ್ರಾಮಸ್ಥರು ಮತ್ತು ಬಳ್ಳಾರಿ ಮಿಲ್ಲರ್ ಪೇಟೆ ನಿವಾಸಿಗಳು ಗ್ರಾಮಲೆಕ್ಕಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಈ ದಿನ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು,
ನಂತರದಲ್ಲಿ ಇವತ್ತಿನ ದಿನ ಪ್ರಭಾರ ಕಂದಾಯ ನಿರೀಕ್ಷಕರ ವೆಂಕಟಸ್ವಾಮಿಯವರ ಮನೆಗೆ ಸುಮಾರು 20 ಜನ ಮನೆಗೆ ನುಗ್ಗಿ ಅವರ ಮೇಲೆ ಮತ್ತು ಅವರ ಪತ್ನಿಯ ಮೇಲೆ ಹಾಗೂ ಮಕ್ಕಳ ಮೇಲೆ ಮಿಲ್ಲರ್ ಪೇಟೆ ನಗರ ನಿವಾಸಿಗಳು ಮಾರಕಾಸ್ತ್ರಗಳಿಂದ ಕೊಲ್ಲಲು ಯತ್ನಿಸಿದ್ದು ಇದರಲ್ಲಿ ಪ್ರಭಾರ ಕಂದಾಯ ನಿರೀಕ್ಷಕರು ವೆಂಕಟಸ್ವಾಮಿ ಇವರು ಮತ್ತು ಇವರ ಪತ್ನಿ ಯವರು ತೀವ್ರವಾಗಿ ಗಾಯಗೊಂಡಿರುತ್ತರೆ. ಈ ಬಗ್ಗೆ ಮಾನ್ಯರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ಕೋರಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ