ಬ್ಯಾಡಗಿ:
ಅನಾರೋಗ್ಯದಿಂದ ನಿಧನ ಹೊಂದಿದತಾಲೂಕಿನ ಮೋಟೆಬೆನ್ನೂರಗ್ರಾಮದ ಬಿಎಸ್‍ಎಫ್‍ಯೋಧ ಮಂಜುನಾಥ ಚನಬಸಪ್ಪ ಹಾವೇರಿ (45) ಅವರಅಂತ್ಯ ಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಮಧ್ನಾಹ್ನ ಗ್ರಾಪಂ ಆವರಣದಲ್ಲಿನೇರವೇರಿಸಲಾಯಿತು.
ಸೋಮವಾರಮೋಟೆಬೆನ್ನೂರಅಕ್ಷರಸಹಃಜನಸ್ತೋಮದಿಂದಕೂಡಿತ್ತು.ಗ್ರಾಮದ ಪ್ರತಿಯೊಬ್ಬರುತಮ್ಮಕುಟುಂಬದಕುಡಿಯನ್ನೆ ಕಳೆದುಕೊಂಡ ಭಾವನೆಯಲ್ಲಿ ಸಾಗರೋಪಾದಿಯಲ್ಲಿ ವೀರಯೋಧನಅಂತಿಮ ಮೆರವಣಿಗೆಯಲ್ಲಿ ಭಾಗಿಯಾಗಿಕಣ್ಣಿರಿಡುತ್ತಿದ್ದ ದೃಶ್ಯಗಳು ಎಲ್ಲರ ಮನ ಕಲಕುವಂತಿದ್ದವು.
23 ವರ್ಷದೇಶಸೇವೆ:
ಜಮ್ಮು ಕಾಶ್ಮೀರ, ಕೋಯಿಮತ್ತೂರ ಬೆಂಗಳೂರಸೇರಿದಂತೆಕಳೆದ 23 ವರ್ಷಗಳಿಂದ ದೇಶದ ಸೇವೆಯಲ್ಲಿತೊಡಗಿದ್ದ ಮಂಜುನಾಥಕುಟುಂಬಕ್ಕೆಒಬ್ಬನೆಆಧಾರ ಸ್ಥಂಬವಾಗಿದ್ದ, ತಾಯಿ ನಾಲ್ವರು ಸಹೋದರಿಯರು, ಸೇರಿದಂತೆ 2 ಮುದ್ದಾದ ಹೆಣ್ಣು ಮಕ್ಕಳು ಹಾಗೂ ಒಬ್ಬ ಮನಗನ್ನು ಮಂಜುನಾಥಅಗಲಿದ್ದಾರೆ.
ಸೆಲ್ಯೂಟ್‍ಮೂಲಕ ವಿದಾಯ:
ಮಹದೇವ ಮೈಲಾರರಂಥಹಅಪ್ರತಿಮಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರರನ್ನುದೇಶಕ್ಕೆ ನೀಡಿದಕೀರ್ತಿ ಹೊಂದಿರುವ ಮೋಟೆಬೆನ್ನೂರಗ್ರಾಮದ ನಿವಾಸಿಯಾಗಿರುವ ಸ್ಪೂರರ್ದುಪಿ ಹಾಗೂ ವೀರಯೋಧನಅಂತಿಮಮೆರವಣಿಗೆಯಲ್ಲಿಈಡೀಗ್ರಾಮವೆ ಭಾಗವಹಿಸಿತ್ತು.ಅಲ್ಲದೇರಸ್ತೆ ಬದಿಗಳಲ್ಲಿ, ಮನೆಗಳ ಚಾವಣಿ ಮೇಲೆ ನಿಂತು ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದ ಪ್ರತಿಯೊಬ್ಬರು ವೀರಯೋಧಮಂಜುನಾಥ ಚನಬಸಪ್ಪ ಹಾವೇರಿಗೆಅಲ್ಲಿಂದಲೆ ಸೆಲ್ಯೂಟ್ ಮಾಡುತ್ತಿದ್ದರು.ಇದುಯೋಧನ ಮೇಲೆ ಗ್ರಾಮಸ್ಥರುಇಟ್ಟಿದ್ದಗೌರವಕ್ಕೆ ಸಾಕ್ಷಿಯಾಗಿತ್ತು.
ಗಾಳಿಯಲ್ಲಿ ಗುಂಡು:
ಹಾವೇರಿಜಿಲ್ಲಾ ಶಶಸ್ತ್ರ ಮೀಸಲು ಪಡೆ ಹಾಗೂ ಬ್ಯಾಡಗಿಎಸ್‍ಎಸ್‍ಐಆರ್.ವಾಯ್.ಅಂಬಿಗೇರ ನೇತೃತ್ವದಲ್ಲಿ ಸರಕಾರಿ ಗೌರಗಳೊಂದಿಗೆ ರಾಷ್ಟ್ರಧ್ವಜವನ್ನು ಹೊದಿಸಿ ಅಂತಿಮ ವಿಧಿವಿಧಾನಗಳನ್ನು ನೇರವೇರಸಲಾಯಿತುಅಲ್ಲದೇ ಮೀಸಲು ಪಡೆ ವತಿಯಿಂದ ಗಾಳಿಯಲ್ಲಿ 3 ಸುತ್ತುಗುಂಡು ಹಾರಿಸಿ ಗೌರವ ಸೂಚಿಸಲಾಯಿತು.
ಶಾಸಕ ಭೇಟಿ:
ಸ್ಥಳೀಯ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಹಶೀಲ್ದಾರ ಜಯಣ್ಣ ತಳವಾರ, ಕಾರ್ಯ ನಿರ್ವಾಹಕಅಧಿಕಾರಿಎ.ಟಿ.ಜಯಕುಮಾರ ಸೇರಿದಂತೆಇನ್ನಿತರರು ವೀರಯೋಧನಅಂತಿಮದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರಯೋಧ ಮಂಜುನಾಥಅವರಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.ಈ ಸಂದರ್ಬದಲ್ಲಿಗ್ರಾಮಸ್ಥರು ಸಮಾಧಿಯ ಬಳಿ ಯೊಧನ ಸ್ಮಾರಕ ನಿರ್ಮಾಣ ಮಾಡುವಂತೆ ಆಗ್ರಹಿಸಿದಾಗಿ ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ