ಅನಧಿಕೃತ ಗೈರಾದರೆ ಮೇಲಾಧಿಕಾರಿಗಳಿಗೆ ನೋಟಿಸ್ ನೀಡಲಾಗುವದು: ಎಸ್ ಎಮ್ ಕಾಂಬ್ಳೆ

ಶಿಗ್ಗಾವಿ 

               ಸಭೆಗೆ ಅಧಿಕಾರಿಗಳ ಪರವಾಗಿ ಯಾರು ಬರುವಂತಿಲ್ಲ, ಅಧಿಕಾರಿಗಳೇ ಬರಬೇಕು ಮತ್ತು ಸಭೆಗೆ ಸಂಪೂರ್ಣ ಮಾಹಿತಿಯನ್ನು ತರಬೇಕು, ಪ್ರತಿ ತಿಂಗಳು 5 ತಾರೀಖಿನಂದು ಕೆಡಿಪಿ ಸಭೆಯನ್ನು ನಡೆಸಲಾಗುವದು, ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಭೆಗೆ ಹಾಜರಾಗಬೇಕು, ಅನಧಿಕೃತ ಗೈರಾದ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳಿಗೆ ನೋಟಿಸ್ ನೀಡಲಾಗುವದು, ಎಂದು ತಾಪಂ ಕಾರ್ಯನಿರ್ವಾಹ ಅಧಿಕಾರಿ ಎಸ್ ಎಮ್ ಕಾಂಬ್ಳೆ ಅಧಿಕಾರಿಗಳಿಗೆ ಕಡಕ್ ಎಚ್ಚರಿಗೆ ನೀಡಿದರು.
             ಬುಧವಾರ ತಾಪಂ ನ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅಧಿಕಾರಿಗಳು ಸಭೆಗೆ ಹಾಜರಾಗದ ಕಾರಣ ವಿದ್ದಾಗ ಮುಂಚಿತವಾಗಿ ಪತ್ರದ ಮೂಲಕ ಅದ್ಯಕ್ಷರಿಗೆ ತಿಳಿಸಬೇಕು ಎಂದು ಎಚ್ಚರಿಸಿದರು.
             ಆಹಾರ ಇಲಾಖೆಗೆ ಸಂಭಂದಿಸಿದಂತೆ ತಾಪಂ ಅದ್ಯಕ್ಷೆ ಪಾರವ್ವ ಆರೇರ್ ಪ್ರಶ್ನಿಸಿ ನೀವು ಪ್ರತಿ ಬಾರಿ ಸಭೆಗೆ ಹೇಳಿರುವ ಮಾಹಿತಿಯನ್ನೆ ಹೇಳಿತಿರಿ ನಾವು ಅದನ್ನೆ ಕೇಳಬೇಕಾಗಿದೆ ಎಂದು ಆಹಾರ ಇಲಾಖೆಯ ವಿಷಯಕ್ಕೆ ಸಂಭಂದಿಸಿದಂತೆ ಉತ್ತರಿಸಿ ಎಂದು ಪ್ರಶ್ನಿಸಿದರು.
            ತಾಲೂಕಿನ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ಹಾಲನ್ನು ನೀಡುತ್ತಿಲ್ಲ ಮತ್ತು ಹಾಲಿನ ಪೌಡರ ಪ್ಯಾಕೆಟುಗಳು ದುರ್ಬಳಕೆಯಾಗುತ್ತಿವೆ ಎಂದು ಉಪಾಧ್ಯಕ್ಷೆ ಪದ್ಮಾವತಿ ಪಾಟೀಲ್ ಸಬೆಗೆ ಹೇಳಿದರು, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದೆ ಎಂದು ಮಾಹಿತಿ ನೀಡಿದಾಗ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಲ್ಲಿ ಸಸಿಗಳನ್ನು ನೆಡಲಾಗಿದೆ ಎಷ್ಟು ಖರ್ಚು ಮಾಡಲಾಗಿದೆ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಮಾಹಿತಿ ನೀಡಲು ವಿಫಲರಾದರು.
ಸಭೆಯಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿರಲಿಲ್ಲ ಮತ್ತು ಭಾಗವಹಿಸಿ ಅಧಿಕಾರಿಗಳು ತಾಲೂಕಿನ ಅಭಿವೃದ್ದಿ ಬಗ್ಗೆ ಚರ್ಚಿಸಿದರು.
               ಸಭೆಯಲ್ಲಿ ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು ಹಾಜರಿದ್ದಿರುವುದನ್ನು ಬಿಟ್ಟರೆ ತಾಲೂಕಾ ಸಿಡಿಪಿಓ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೈರು ಸಭೆಯಲ್ಲಿ ಎದ್ದು ಕಾಣುತ್ತಿತ್ತು

Recent Articles

spot_img

Related Stories

Share via
Copy link