ಅನುದಾನಿತ ಶಿಕ್ಷಕರ ಸಭೆ

ಸಾಸ್ವೆಹಳ್ಳಿ: ‘      ನಿವೃತ್ತಿಯ ನಂತರದ ಜೀವನವು ಬಹು ಘೋರವಾಗಿರುತ್ತದೆ. ತನ್ನೆಲ್ಲ ಜೀವನವನ್ನು ಸೇವೆಯಲ್ಲಿಯೇ ಮುಗಿಸಿದ ಅನುದಾನಿತ ನೌಕರರು ಸಂಧ್ಯಾ ಕಾಲದಲ್ಲಿ ಬಿಕ್ಷಾಟನೆಗೆ ಮಾಡುವ ಪರಿಸ್ಥಿತಿಯು ನಿರ್ಮಾಣವಾದ ಹಾಗೆ ಆಗಿದೆ’ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಜಿ.ದೊಡ್ಡಪ್ಪ ಅಭಿಪ್ರಾಯಪಟ್ಟರು.    

      ಹೋಬಳಿಯ ಕುಂದೂರಿನ ಬಿಇಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅನುದಾನಿತ ಶಿಕ್ಷಕರ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.      

       ‘ಹೋರಾಟದಲ್ಲಿ ಶಕ್ತಿಯಿದೆ ಎಂಬುದನ್ನು ಮಹತ್ಮ ಗಾಂಧೀಜಿಯವರು ತೋರಿಸಿಕೊಟ್ಟಿದ್ದಾರೆ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಬೇಕು. ಮುಂದೆ ನಾವು ನಿವೃತ್ತರಾದ ಮೇಲೆ ನಮ್ಮನ್ನು ಅವಲಂಬಿಸಿರುವ ಕುಟುಂಬವು ಬೀದಿಗೆ ಬರುತ್ತದೆ. ಈಗ ತಾಲ್ಲೂಕಿನಲ್ಲಿ ಮೃತಪಟ್ಟಿರುವ ನಳಂದ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ, ನವಸುಮ ಶಾಲೆಯ ಪ್ರಶಾಂತ್ ಇವರ ಕುಟುಂಬಕ್ಕೆ ಪಿಂಚಣಿ ಇಲ್ಲದ ಪರಿಸ್ಥಿತಿಯು ನಿರ್ಮಾಣವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ಹಲವು ಶಿಕ್ಷಕರಿಗೆ ಯಾವುದೇ ಸೌಲಭ್ಯಗಳು ಇಲ್ಲದ ಸ್ಥಿತಿಯು ನಿರ್ಮಾಣವಾಗಿದೆ’ ಎಂದರು.      

   ಸಂಘದ ಅಧ್ಯಕ್ಷ ಎಚ್.ಡಿ ಧನಂಜಯ್ ಮಾತನಾಡಿ, ಅ.11 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಾಣಬಿಟ್ಟೇವು ಪಿಂಚಣಿ ಬಿಡೆವು ಹೋರಾಟದಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಕೊಳ್ಳಬೇಕು. ನಮ್ಮ ಹೋರಾಟದ ಶಕ್ತಿಯುನ್ನು ರಾಜ್ಯ ಸರ್ಕಾರಕ್ಕೆ ತೋರಿಸಬೇಕು. ಸುಪ್ರೀಂ ಕೋರ್ಟ್ ಸಹ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿಯನ್ನು ನೀಡಬೇಕು ಎಂದು ಆದೇಶವನ್ನು ಮಾಡಿದೆ ನಾವು ಆರಿಸಿಕಳುಹಿಸಿರುವ ಜನಪ್ರತಿನಿಧಿಗಳು ನಮಗೆ ಕಾಲ್ಪನಿಕ ವೇತನ ಹಾಗೂ ಪಿಂಚಣಿ ನೀಡುವ ಕ್ರಮ ಕೈಗೊಳ್ಳಬೇಕು ಎಂದರು.       ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಎನ್.ಎಂ, ಬಿಇಎಸ್ ಶಾಲೆಯ ಮುಖ್ಯ ಶಿಕ್ಷಕ ಟಿ.ಎಸ್ ರಾಮಪ್ಪ, ಸಹಕಾರ್ಯದರ್ಶಿ ಮಾರುತಿ ಜೆ, ಉಪಾಧ್ಯಕ್ಷ ಕರೇಗೌಡ್ರು ಮಾತನಾಡಿದರು. ಸಭೆಯಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಎಲ್ಲಾ ಅನುದಾನಿತ ಶಿಕ್ಷಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ