ಅನ್ನ-ಮಾನ ಎರಡೂ ಉಂಡ ಅಪರಾಧಿಗೆ 22 ವರ್ಷ ಜೈಲು!!

ಹುಳಿಯಾರು :

      ಮನೆಯಲ್ಲಿ ಯಾರೂ ಇಲ್ಲದ ವೇಳೆ 3ನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಳಿಯಾರು ಹೋಬಳಿ ಹಂದಿಗನಡು ಗ್ರಾಮದ ಅಪರಾಧಿ ರಂಗಸ್ವಾಮಿಗೆ (45) 22 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತುಮಕೂರಿನ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.

  ಅನ್ನ-ಮಾನ ಎರಡೂ ಉಂಡ :

      ಅಪರಾಧಿ ರಂಗಸ್ವಾಮಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಪಕ್ಕದ ಮನೆಯವನಾಗಿದ್ದು, ಬಾಲಕಿಯ ಮನೆಯವರ ಹೊಲದ ಕೆಲಸಕ್ಕೆ ಬರುತ್ತಿದ್ದ. 2019ರ ನವೆಂಬರ್ 24 ರಂದು ಅಂದರೆ ಘಟನೆ ನಡೆದ ದಿನ ಕೆಲಸ ಮುಗಿಸಿ ಬಾಲಕಿಯ ಮನೆಯಲ್ಲೇ ಊಟ ಮಾಡಿ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದ. ಇದೇ ವೇಳೆ ಬಾಲಕಿಯ ಅಜ್ಜಿಗೆ ಅನಾರೋಗ್ಯದ ಕಾರಣ ಬಾಲಕಿ ತಂದೆ ತನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದ್ದರು. ಇದೇ ಸಮಯ ಬಳಸಿಕೊಂಡ ಅಪರಾಧಿ ರಂಗಸ್ವಾಮಿ ತನ್ನ ಮನೆಗೆ ಹೋಗುವಂತೆ ನಟಿಸಿ ಯಾರು ಇಲ್ಲದ ಸಮಯದಲ್ಲಿ ಬಾಲಕಿ ಮೇಲೆ ಲೈಂಕಿಕ ದೌರ್ಜನ್ಯ ಎಸಗಿದ್ದ.

ಪೋಕ್ಸೋ ಕಾಯ್ದೆಯಡಿ ಪ್ರಕರಣ :

      ಬಾಲಕಿ ತಂದೆ ಮನೆಗೆ ಬಂದಾಗ ಮಗಳು ಅಳುವುದನ್ನು ನೋಡಿ ಪ್ರಶ್ನಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣ ಬಾಲಕಿಯ ತಂದೆ ಹುಳಿಯಾರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು 2019ರಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದರು. ತುಮಕೂರು ಪೋಕ್ಸೋ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದು ನ್ಯಾಯಾಧೀಶರಾದ ಎನ್.ಕೃಷ್ಣಯ್ಯ ಅವರು ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ 22 ವರ್ಷ ಶಿಕ್ಷೆ, 30 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಕೀಲರಾದ ಜಿ.ವಿ.ಗಾಯತ್ರಿರಾಜು ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link