ನವದೆಹಲಿ
ಇಂದು ಬೆಳಿಗ್ಗೆ 09:07 ರ ಸುಮಾರಿಗೆ ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪವು ಭೂಮಿಯಿಂದ 186 ಕಿಮೀ ಆಳದಲ್ಲಿ ಆಗಿದೆ ಎಂದು ಹೇಳಲಾಗಿದೆ.
Earthquake of Magnitude:4.3, Occurred on 04-02-2023, 09:07:23 IST, Lat: 36.64 & Long: 71.46, Depth: 186 Km ,Location: Afghanistan for more information Download the BhooKamp App https://t.co/sjDx0YlJfc pic.twitter.com/UEl3nhnwWi
— National Center for Seismology (@NCS_Earthquake) February 4, 2023
ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಭಯಾನಕ ಭೂಕಂಪ ಸಂಭವಿಸಿತ್ತು. ಇದರಿಂದಾಗಿ 1000 ಮಂದಿ ಮೃತಪಟ್ಟಿದ್ದಾರೆ ಮತ್ತು 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿತು.








