ಅಮಿತ್‌ ಷಾ ರನ್ನು ಭೇಟಿ ಮಾಡಿದ ಕುಸ್ತಿ ಪಟುಗಳು…!

ನವದೆಹಲಿ: 

      ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. 

    ಖಾಸಗಿ ಸುದ್ದಿ ವಾಹಿನಿಗೆ ಈ ಬಗ್ಗೆ ಹೇಳಿಕೆ ನೀಡಿರುವ ಒಲಂಪಿಯನ್ ಭಜರಂಗ್ ಪುನಿಯಾ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ  ಬ್ರಿಜ್ ಭೂಷಣ್ ಸಿಂಗ್ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಗೃಹ ಸಚಿವರ ಬಳಿ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ. ಗೃಹ ಸಚಿವರೊಂದಿಗಿನ ಸಭೆಯಲ್ಲಿ ಪುನಿಯಾ, ಸಾಕ್ಷಿ ಮಲ್ಲೀಕ್, ಸಂಗೀತಾ ಫೊಗಟ್ ಹಾಗೂ ಸತ್ಯವಾರ್ತ್ ಕಡಿಯಾನ್ ಅವರೂ ಇದ್ದರು.ಕುಸ್ತಿಪಟುಗಳ ಮನವಿಯನ್ನು ಆಲಿಸಿದ ಗೃಹ ಸಚಿವ ಅಮಿತ್ ಶಾ ಅವರು ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ. 

    ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಒತ್ತಾಯಿಸಿ ಕುಸ್ತಿಪಟುಗಳು ಸರ್ಕಾರಕ್ಕೆ ನೀಡಿದ್ದ 5 ದಿನಗಳ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಅಮಿತ್ ಶಾ ಅವರ ಭೇಟಿಗೆ ಸಮಯ ಕೇಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap