ಬೆಂಗಳೂರು
ದಲಿತ ಸಮಯದಾಯದಲ್ಲಿ ಒಳ ಮೀಸಲಾತಿ ಕಲ್ಪಿಸುವ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಸ್ವಲ್ಪ ಸಮಾಯಾವಕಾಶ ನೀಡಿದರೆ ಎಲ್ಲವನ್ನು ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಅರಮನೆ ಮೈದಾನದಲ್ಲಿ ಇಂದು ಆಯೋಜಿಸಿದ್ದ ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಬದ್ದವಾಗಿದೆ. ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಖರ್ಗೆ ಮತ್ತು ಮುನಿಯಪ್ಪ ಅವರು ರಾಜ್ಯದಲ್ಲಿನ ಹಿರಿಯ ರಾಜಕಾರಣಿಗಳು ಅವರಿಬ್ಬರನ್ನು ಬೇರ್ಪಡಿಸುವ ಕೆಲಸ ಯಾರು ಮಾಡಬಾರದು.ತಮ್ಮ ಬೇಡಿಕೆಯನ್ನು ಈಡೇರಿಸುವ ಕೆಲಸ ಸರ್ಕಾರ ಮಾಡುತ್ತದೆ,ಆದರೆ ಸ್ವಲ್ಪ ಕಾಲ ಸಮಯಾವಕಾಶ ಕೊಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂವಿಧಾನ ಉಳಿಸುವ ಕೆಲಸವನ್ನು ಎಲ್ಲರು ಮಾಡಬೇಕಿದೆ. ಹಿಂದು,ಅಲ್ಪಸಂಖ್ಯಾತರು ಎಲ್ಲರೂ ಇದಕ್ಕೆ ಶ್ರಮಿಸಬೇಕು. ಕೇವಲ ಖರ್ಗೆಯವರು ಮಾಡುತ್ತಾರೆ ಎಂದು ಮುಂದೆ ನೂಕಿ ಹಿಂದೆ ಸರಿಯಬಾರದು. ಖರ್ಗೆಯ ಅವರನ್ನು ಮುಂದೆಬಿಟ್ಟು ವರದಿ ಜಾರಿ ಮಾಡುವ ವಿಚಾರದಲ್ಲಿ ಅವರೇ ಹಿಂದೆ ಸರಿಯುತ್ತಾರೆ ಎಂದು ಕೆ.ಎಚ್.ಮುನಿಯಪ್ಪಗೆ ಅವರಿಗೆ ಬಹಿರಂಗವಾಗಿ ತಿರುಗೇಟು ನೀಡಿದರು.
ಪ್ರತ್ಯೇಕವಾಗುವ ಬದಲು ಎಲ್ಲರೂ ಒಟ್ಟಾಗಿ ಹೋದರೆ ಮಾತ್ರ ಕಾರ್ಯ ಸಾಧ್ಯವಾಗುತ್ತದೆ. ಅವರೇ ಹಿಂದೆ ಉಳಿದರೆ ಜಾರಿ ಮಾಡುವುದು ಹೇಗೆ ಎಂದು ಕೆ.ಎಚ್.ಮುನಿಯಪ್ಪ ಅವರನ್ನು ಖರ್ಗೆ ಪ್ರಶ್ನಿಸಿದರು.
ಯಾವುದೇ ವಿಚಾರ ಬಂದರೂ ಖರ್ಗೆ ಮಾಡುತ್ತಾರೆ ಎಂದು ಬಿಂಬಿಸುವುದು ಸರಿಯಲ್ಲ ಹಾಗೆಂದು ನಾನೇನು ದೇವರಲ್ಲ. ಸಚಿವ ಸ್ಥಾನ ನೀಡುವುದು ಕುಮಾರಸ್ವಾಮಿ ಅವರ ಪರಮಾಧಿಕಾರ.ಅಲ್ಲೂ ನನ್ನದೇ ಮಾತು ನಡೆಯುತ್ತದೆ ಎಂದು ಹೇಳುತ್ತಾರೆ.ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಹಾಗು ಜಾತಿ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಪರೋಕ್ಷವಾಗಿ ಮುನಿಯಪ್ಪ ಅವರ ಜೊತೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ವೇದಿಕೆಯೆಲ್ಲೇ ಮಲ್ಲಿಕಾರ್ಜುನ್ ಖರ್ಗೆ ಕುಟುಕಿದರು.
ಈ ಮೊದಲು ಮಾತನಾಡಿದ ಸಂಸದ ಕೆ.ಹೆಚ್.ಮುನಿಯಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ1 ಸಾವಿರ ಕೋಟಿ , ಆದಿ ಜಾಂಭವ ಅಭಿವೃದ್ಧಿ ನಿಗಮಕ್ಕೆ 1 ಸಾವಿರ ಕೋಟಿ ಮುಂಬರುವ ಬಜೆಟ್ ನಲ್ಲಿ ಅನುದಾನ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗು ಉಪ ಮುಖ್ಯಮಂತ್ರಿ ಪರಮೇಶ್ವರ್ ಗಮನ ಸೆಳೆದ ಕೆ.ಹೆಚ್.ಮುನಿಯಪ್ಪ, ನ್ಯಾ.ಸದಾಶಿವ ಆಯೋಗದ ವರದಿ ಮಲ್ಲಿಕಾರ್ಜುನ ಖರ್ಗೆಯವರ ಮೂಲಕವೇ ಜಾರಿಗೆ ತರುತ್ತೇವೆಂದು ಘೋಷಿಸಿದ್ದು ಖರ್ಗೆ ಅಸಮಾಧಾನಕ್ಕೆ ಕಾರಣವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
