ತುಮಕೂರು
ಮಹಾನಗರ ಪಾಲಿಕೆಯ ಆಯುಕ್ತರಲ್ಲಿ ಮನವಿ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆಯಡಿ ಪರಿಶಿಷ್ಟ ಜಾತಿ/ಪ.ಪಂಗಡದ ಎಸ್‍ಇಪಿ/ಟಿಎಸ್‍ಪಿ ಯೋಜನೆಯಡಿ 2018-19ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನದಡಿಯ ನಿಟ್ಟಿನಲ್ಲಿ ದಿನಾಂಕ- 30-7-2018 ರಂದು ಪ್ರಕಟಣೆ ಮೂಲಕ ಅರ್ಜಿ ಕರೆದಿರುತ್ತಿರಾ. ಕೊನೆಯ ದಿನಾಂಕವೆಂದು 31-8-2018 ರನ್ನು ನಿಗಧಿಗೊಳಿಸಿರುತ್ತಿರಾ. ಆದರೇ 2018ರ ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆ ಬಂದ ಕಾರಣದಿಂದಾಗಿ ಮತ್ತು ಪ್ರತಿ ಅರ್ಜಿಗಳಿಗೂ ಕಾರ್ಪೋರೇಟರ್‍ಗಳ ಸಹಿ ಕಡ್ಡಾಯವಾಗಿರುವ ಕಾರಣ ಅರ್ಜಿಗಳನ್ನು ವಿವಿಧ ಸ್ಲಂ ಮತ್ತು ನಗರಗಳಿಂದ ವಿದ್ಯಾರ್ಥಿಗಳು ಸಲ್ಲಿಸಲಾಗಿಲ್ಲ. ಮಹಾ ನಗರಪಾಲಿಕೆ ಠಪಾಲ್ ಕಛೇರಿಯಲ್ಲಿ ದಿನಾಂಕ ಕೊನೆಗೊಂಡಿದೆ ಎಂದು ಮರು ವಾಪಾಸು ಕಳಿಸುತ್ತಿದ್ದಾರೆ, ದಯಮಾಡಿ ಯೋಜನೆಯ ಸದ್ಬಳಕೆಯಾಗಲು ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ಹಲವಾರು ವಿದ್ಯಾರ್ಥಿಗಳಿಗೆ/ಅಂಗವಿಕಲರಿಗೆ/ಆರೋಗ್ಯ ಚಿಕಿತ್ಸಾಗಾರರಿಗೆ ಮತ್ತು ನೈಜ ಫಲಾನುಭವಿಗಳಿಗೆ ತಲುಪಲು ದಿನಾಂಕವನ್ನು ಮುಂದೂಡಬೇಕಾಗಿ ಮಾನ್ಯ ಆಯುಕ್ತರಲ್ಲಿ ತುಮಕೂರು ಸಮಾನ ಮಕ್ಕಳ ಮಂಟಪದಿಂದ ಒತ್ತಾಯಿಸುತ್ತಿದ್ದೇವೆ.