ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ

ಹಾನಗಲ್ಲ :

           ಧರ್ಮ ಮನುಷ್ಯರನ್ನು ಕೂಡಿಸುತ್ತದೆ. ಧರ್ಮಾಚರಣೆಗಳು ಸಂಸ್ಕಾರ ನೀಡುತ್ತವೆ. ಭಾರತೀಯ ಸಂಸ್ಕತಿ ಎಲ್ಲ ಧರ್ಮಗಳನ್ನು ಗೌರವಿಸುವುದನ್ನು ಕಲಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತಿಳಿಸಿದರು.
            ಶನಿವಾರ ಪಟ್ಟಣದ ಕಲ್ಲಹಕ್ಕಲ್- ಕಮಾಟಗೇರಿ ಓಣಿಯಲ್ಲಿರುವ ವರಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಐಆಗಿ ಮಾತನಾಡಿದ ಅವರು, ಶ್ರಾವಣ ಮಾಸ ಒಳ್ಳೆಯದನ್ನು ಕೇಳುವ, ಒಳ್ಳೆಯ ಕಾರ್ಯಕ್ಕೆ ಸ್ಪೂರ್ತಿ ನೀಡುವ ಒಂದು ವಿಶೇಷ ಸಂದರ್ಭವಾಗಿದೆ. ನಾನು ಹಾನಗಲ್ಲ ಕ್ಷೇತ್ರದ ಅಭಿವೃದ್ಧಿಗೆ ಈ ಶ್ರಾವಣ ಮಾಸದ ಮೂಲಕ ಶಪತ ಮಾಡಿದ್ದೇನೆ. ನನ್ನ ಕೈಲಾದ ಸೇವೆಯನ್ನು ಹಾನಗಲ್ಲ ತಾಲೂಕಿಗೆ ಸಲ್ಲಿಸುವ ಮೂಲಕ ಸಾರ್ಥಕ ದಿನಗಳನ್ನು ನನ್ನದಾಗಿಸಿಕೊಳ್ಳುವ ಆಶಯ ಹೊಂದಿದ್ದೇನೆ. ಹಾನಗಲ್ಲು ನನಗೆ ಬಹಳಷ್ಟು ಹೊಸ ಅನುಭವಗಳನ್ನು ನೀಡಿದೆ. ಇಲ್ಲಿಯ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯುವುದಿಲ್ಲ ಎಂದರು.
            ನೂತನ ಪುರಸಭೆ ಸದಸ್ಯ ಅನಂತವಿಕಾಸ ನಿಂಗೋಜಿ ಮಾತನಾಡಿ, ಹಬ್ಬ ಹರಿದಿನಗಳು ನಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಧರ್ಮಾಚರಣೆಗಳು ಮನುಷ್ಯನನ್ನು ಶುದ್ಧಗೊಳಿಸುತ್ತವೆ. ದಾನ ಧರ್ಮಗಳ ಮೂಲಕ ಮನುಷ್ಯ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
             ತಾಲೂಕು ಪಂಚಾಯತಿ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಉಪಾಧ್ಯಕ್ಷೆ ಸರಳಾ ಜಾಧವ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ನೂತನ ಸದಸ್ಯರಾದ ಮಹೇಶ ಪವಾಡಿ, ಶೋಭಾ ಹೊಂಬಳಿ, ಮುಖಂಡರಾದ ರಾಮಣ್ಣ ನಾಗಜ್ಜನವರ, ವಿನೋದ ಕಮಾಟಿ, ಮಂಜುನಾಥ ನಾಗಜ್ಜನವರ, ನಾಗೇಂದ್ರ ಬಮ್ಮನಹಳ್ಳಿ, ಅಪ್ಪಣ್ಣ ಚಿಕ್ಕಣ್ಣನವರ, ಪ್ರಭು ನಾಗಜ್ಜನವರ ಮೊದಲಾದವರು ಈ ಸಂದರ್ಭದಲ್ಲಿದ್ದರು

Recent Articles

spot_img

Related Stories

Share via
Copy link