ಆಟೋದರ ಪರಿಷ್ಕರಣೆಗೆ ಚಾಲಕರು ಮಾಲೀಕರಿಂದ ಮನವಿ

ಹಿರಿಯೂರು :
              ಸುಮಾರು ಅನೇಕ ವರ್ಷಗಳಿಂದ ಆಟೋ ಚಾಲನೆ ಮಾಡುತ್ತಾ ಬಂದಿದ್ದು ಡೀಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳವಾಗಿದೆ ಅಲ್ಲದೇ ಆಟೋ, ಇನ್ಸೂರೆನ್ಸ್, ಎಫ್.ಸಿ, ಲೈಸೆನ್ಸ್, ಪರ್ಮಿಟ್, ದರಗಳೂ ಹೆಚ್ಚಾಗಿವೆ ಈ ಎಲ್ಲಾ ಶುಲ್ಕಗಳನ್ನು ಪಾವತಿಸಿ ಸಂಸಾರವನ್ನು ನಡೆಸುವುದು ಹಾಗೂ ಆಟೋ ರಿಪೇರಿ ಖರ್ಚುಗಳನ್ನು ಭರಿಸುವುದು ತುಂಬಾ ಕಷ್ಟವಾಗಿದೆ, ಆದ್ದರಿಂದ ಈಗಿರುವ ಆಟೋ ದರಗಳ ಪರಿಷ್ಕರಣೆ ಮಾಡಿ ಕನಿಷ್ಟ ದರ 25 ನಿಗದಿಮಾಡಿಕೊಡಬೇಕೆಂದು ಹಿರಿಯೂರು ಆಟೋ ಚಾಲಕರು ಮತ್ತು ಮಾಲೀಕರು ಉಪತಹಶೀಲ್ದಾರ್ ಚಂದ್ರುಕುಮಾರ್ ರವರಿಗೆ ಮನವಿ ಅರ್ಪಿಸಿದರು.
                ಈ ಸಂದರ್ಭದಲ್ಲಿ ತಾಲ್ಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಟಿ.ಬೈಲಪ್ಪ, ಉಪಾಧ್ಯಕ್ಷರಾದ ವಜೀರ್, ಕಾರ್ಯದರ್ಶಿ ಕೆ.ಗಂಗಾಧರ್, ಸಹಕಾರ್ಯದರ್ಶಿ ಗಿರೀಶ್, ಖಜಾಂಚಿ ಕೃಷ್ಣ, ನಿರ್ದೇಶಕರಾದ ಉಮೇಶ್, ಬಾಬಣ್ಣ, ನರಸಿಂಹಮೂರ್ತಿ, ಜಯ್ಯಣ್ಣ, ತಿಪ್ಪೇಸ್ವಾಮಿ, ರಘು, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link