ಆಧ್ಯಾತ್ಮ ಶಿಕ್ಷಕಿಯರಿಂದ ರಕ್ಷಾ ಬಂಧನ ಆಚರಣೆ

ಹುಳಿಯಾರು:

               ಇಲ್ಲಿನ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಆಧ್ಯಾತ್ಮ ಶಿಕ್ಷಕಿಯರಾದ ಕುಮಾರಿ ಗೀತಕ್ಕ, ನೇತ್ರಕ್ಕ ಹಾಗೂ ಚಂದನಕ್ಕ ಅವರು ಆರಕ್ಷಕಠಾಣೆ, ಬೆಸ್ಕಾಂ ಕಛೇರಿ, ನಾಡಕಛೇರಿ, ಗ್ರಾಪಂ ಕಛೇರಿ ಶಾಲಾ ಕಾಲೇಜು, ಬ್ಯಾಂಕ್‍ಗಳು ಹೀಗೆ ಗ್ರಾಮದ ಪ್ರಮುಖ ಸರ್ಕಾರಿ ಕಛೇರಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಅಲ್ಲಿನ ಮುಖ್ಯಸ್ಥರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು.

               ಈ ಸಂದರ್ಭದಲ್ಲಿ ಗೀತಕ್ಕ ಮಾತನಾಡಿ ರಕ್ಷ ಬಂಧನ ಹಬ್ಬವನ್ನು ವಿಷ ನಿವಾರಕ ಪರ್ವ ಎನ್ನುವರು. ಅಂದರೆ ನಮ್ಮಲ್ಲಿರುವ ಪಂಚ ವಿಕಾರಗಳಿಂದ ಆತ್ಮವನ್ನು ರಕ್ಷಿಸಿ ಪುಣ್ಯಾತ್ಮರೂ, ಪವಿತ್ರ ಆತ್ಮಗಳೂ ಆಗಬೇಕು. ಅದಕ್ಕಾಗಿ ಕಾಮ, ಕ್ರೋದಗಳೆಂಬ ವಿಷವನ್ನು ತೊಳೆದು ಹಾಕಲು ಮಾಡಿದ ಪ್ರತಿಜ್ಞೆಯ ಸಂಕೇತವೇ ಈ ರಕ್ಷ ಬಂಧನ. ಈ ರಕ್ಷೆಯನ್ನು ಸೋದರಿಯು ಸೋದರನಿಗೆ ಕಟ್ಟಬೇಕೆಂಬ ಅಭಿಪ್ರಾಯವಿದೆ. ನಾವೆಲ್ಲರೂ ಒಬ್ಬ ಪರಮಾತ್ಮನ ಮಕ್ಕಳೆಂದ ಮೇಲೆ ವಾಸ್ತವವಾಗಿ ಆತ್ಮೀಯ ದೃಷ್ಠಿಯಿಂದ ನಾವೆಲ್ಲರೂ ಸೋದರಸೋದರಿಯರಲ್ಲವೇ ಎಂದು ಪ್ರಶ್ನಿಸಿದರು.

               ಸ್ತ್ರೀಯರಿಗೆ ಯಾವುದಾದರೂ ಮಾನ ರಕ್ಷೆಯ ಅಪಾಯ ಸಂಭವಿಸಿದಾಗ ಸಹೋದರನು ಮಾತ್ರ ರಕ್ಷಣೆಗೆ ಬರುವುದಿಲ್ಲ. ಎಲ್ಲರೂ ಬರುತ್ತಾರೆ. ಅಲ್ಲದೆ ನಮ್ಮ ದೃಷ್ಠಿ ಮತ್ತು ವೃತ್ತಿ ಪವಿತ್ರವಾಗಿದ್ದರೆ ಕಟುಕನೂ ಸಹೋದರನಾಗುತ್ತಾನೆ. ಅದೇ ವೃತ್ತಿ, ದೃಷ್ಠಿ ಅಪವಿತ್ರವಾದಾಗ ಸಹೋದರನೂ ಕಟುಕನಾಗುತ್ತಾನೆ. ಬಹುಮುಖ್ಯವಾಗಿ ದೇವೆಂದ್ರನೂ ತನ್ನ ಧರ್ಮಪತ್ನಿ ಇಂದ್ರಾಣಿಯಿಂದ ಸ್ವರ್ಗ ಪದವಿ ಪಡೆಯಲು ರಕ್ಷಾಬಂಧನ ಕಟ್ಟಿಸಿಕೊಂಡನೆಂಬ ಉಲ್ಲೇಖವಿದೆ. ಹೀಗಿರುವಾಗ ಆತ್ಮ ಪವಿತ್ರವಾಗಿಸುವ ರಾಖಿಯನ್ನು ಯಾರು ಯಾರಿಗೆ ಬೇಕಾದರೂ ಕಟ್ಟಬಹುದಾಗಿದೆ ಎಂದರು.

               ಗೀತಕ್ಕ ಅವರೊಂದಿಗೆ ರಘುನಾಥ್, ಶಿವಕುಮಾರ್, ತಿಮ್ಮಯ್ಯ, ಲಕ್ಷ್ಮಣ್, ಉಮೇಶ್, ಸುಗಂಧರಾಜ್, ಪಂಚಾಕ್ಷರಯ್ಯ, ಶಂಕರಲಿಂಗಯ್ಯ, ಶಕುಂತಲಕ್ಕ, ಲಲಿತಮ್ಮ, ಗಂಗಮ್ಮ, ಕರಿಯಮ್ಮ, ನೀಲಮ್ಮ, ಸಿದ್ದಬಸವಯ್ಯ, ನಿಜಲಿಂಗಪ್ಪ, ವೆಂಕಟೇಶ್, ಅವಿನಾಶ್, ಮರಿಯಣ್ಣ, ರತ್ನಕ್ಕ, ಭವಾನಿ, ಲತಾ, ಚಂದನಾ, ನೇತ್ರಕ್ಕ ಮತ್ತಿತರರು ಇದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link