ಧರ್ಮವನ್ನ ಒಡೆಯಲು ತಂತ್ರ ರೂಪಿಸಿದವರಿಗೆ ರಾಜ್ಯದ ಜನರೇ ತಕ್ಕ ಪಾಠ

ಕುಣಿಗಲ್:-

  ಕರ್ನಾಟಕ ರಾಜ್ಯದಲ್ಲಿ ಶತ ಶತಮಾನಗಳಿಂದ ಒಗ್ಗಟ್ಟಿನಿಂದಿದ್ದ ವೀರಶೈವ-ಲಿಂಗಾಯುತ ಧರ್ಮವನ್ನ ಒಡೆಯಲು ತಂತ್ರ ರೂಪಿಸಿದವರಿಗೆ ಇಂದು ರಾಜ್ಯದ ಜನರೇ ತಕ್ಕ ಪಾಠಕಲಿಸಿದ್ದಾರೆಂದು ಶ್ರೀ ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ರಾಜದೇಶಿಕೇಂದ್ರ ಭಗವತ್ಪಾದರು ತಿಳಿಸಿದರು.

   ಅವರು ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಕುಣಿಗಲ್ ಟೌನ್ ವೀರಶೈವ ಸಮಾಜ ಸೇವಾ ಸಮಿತಿವತಿಯಿಂದ ನಡೆದ ಜಗದ್ಗುರು ರೇಣುಕಚಾರ್ಯ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಇಲ್ಲಿ ಜಗದ್ಗುರು ರೇಣುಕಚಾರ್ಯರು ಪ್ರಾಚೀನರು. ಆ ಕಾಲದಲ್ಲೇ 18 ಮಠಗಳನ್ನು ಸ್ಥಾಪಿಸಿ ದೀನ ದಲಿತ ಶೋಷಿತರ ಉದ್ದಾರ ಕೈಗೊಂಡಿದ್ದರು. ಪಂಚ ಪೀಠಗಳೂ ಕೂಡ ಅದೇ ಮಾರ್ಗದಲ್ಲಿ ನಡೆದುಕೊಂಡು ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಬರುತ್ತಿವೆ. ಬಸವಣ್ಣ ಕೂಡ ತಮ್ಮ ವಚನಗಳ ಮೂಲಕ ಅದೆ ತತ್ವ ಸಿದ್ದಾಂತಗಳನ್ನು ಸಾರುವ ಮೂಲಕ ಸಮಾಜಿಕ ಪಿಡುಗುಗಳನ್ನು ತೊಲಗಿಸುವ ಕೆಲಸ ಮಾಡಿದರು.

    ರೇಣುಕರ ಕಾಲಕ್ಕೂ ಬಸವಣ್ಣ ಅವರ ಕಾಲಕ್ಕೂ ಅಜಗಜಾಂತರ ಅವರವರ ಕಾಲಕ್ಕೆ ತಕ್ಕಂತೆ ಒಂದೇ ತತ್ವ ಸಿದ್ದಾಂತಗಳನ್ನು ಸಾರಿದ ಮಹಾನ್ ದೇವತಾ ಮನುಷ್ಯರು ಇಂತಹವರ ಇತಿಹಾಸದ ತಿರುಳು ಇಲ್ಲದ ಜನ ಬೇರೆ ಬೇರೆ ರೀತಿ ಹೇಳುವ ಮೂಲಕ ವೀರಶೈವ ಸಮಾಜದಲ್ಲಿ ಸಂರ್ಘಷ ಉಂಟುಮಾಡಲು ಕಾರಣರಾಗಿದ್ದಾರೆ.

    ಅಲ್ಲದೆ ವೀರಶೈವ ಧರ್ಮದಿಂದ ಲಿಂಗಾಯತರನ್ನು ಬೇರೆ ಮಾಡುವ ತಂತ್ರಗಾರಿಕೆಯಿಂದ ರಾಜಕೀಯ ಲಾಭ ಹಾಗೂ ಜೊತೆಗೆ ಬಹುಸಂಖ್ಯಾತ ವೀರಶೈವ ಸಮುದಾಯವನ್ನು ರಾಜಕೀಯ ಸ್ಥಾನಮಾನ ತಪ್ಪಿಸುವ ಉದ್ದೇಶದಿಂದ ಈ ಪಿತೂರಿ ಮಾಡಿದರು. ಆದರೆ ನಾಡಿನ ಜನತೆ ವಿರಶೈವ- ಲಿಂಗಾಯತ ಎರಡು ಒಂದೇ ಎಂದು ಸ್ಪಷ್ಟ ಸಂದೇಶ ಕೊಡುವ ಮೂಲಕ ಧರ್ಮ ಒಡೆಯಲು ತಂತ್ರ ರೂಪಿಸಿದವರಿಗೆ ತಕ್ಕ ಪಾಠಕಲಿಸಿದ್ದಾರೆಂದು ಟೀಕಿಸಿದರು.

    ಇಂದಿಗೂ ರಾಜ್ಯದಲ್ಲಿ ಸಮಾಜ ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಬಸವಣ್ಣ ಹಾಗೂ ರೇಣುಕ ಜಯಂತಿಯನ್ನು ಒಟ್ಟಿಗೆ ಮಾಡಿಕೊಂಡು ಬುತ್ತಿದ್ದೇವೆ. ಈ ಜಿಲ್ಲೆಯ ಕುಣಿಗಲ್‍ನಲ್ಲಿಯೂ ಸಮಾಜದ ಭಾಂದವರು ಈ ಉತ್ತಮ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ದೇಶದಲ್ಲಿ ಹತ್ತು ಹಲವು ಧರ್ಮ, ಜಾತಿ, ಸಂಸ್ಕøತಿ, ಪರಂಪರೆ ಇದ್ದರೂ ಧರ್ಮದ ಅಚರಣೆ ಬೇರೆ ಬೇರೆಯಾಗಿದ್ದರೂ ಎಲ್ಲವೂ ಮಾನವ ಕಲ್ಯಾಣವೇ ಮುಖ್ಯ ಉದ್ದೇಶವಾಗಿತ್ತು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸುವ ಧರ್ಮ ಮಾತ್ರ ವೀರಶೈವ ಧರ್ಮ ಎಲ್ಲರನ್ನು ನನ್ನವರೆಂದು ಎಂದೇ ಬೆಳೆದು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎಂದರು.

     ನಿವೃತ್ತ ಜಿಲ್ಲಾಧಿಕಾರಿ ಡಾ.ಸೋಮಶೇಖರ್ ಮಾತನಾಡಿ ಇಂದು ಸಂಸ್ಕøತಿ ಸಂಸ್ಕಾರ ಕಲಿಯಲು ಮಕ್ಕಳ ಕೈಗೆ ವಚನ ಸಾಹಿತ್ಯ ನೀಡಬೇಕಾಗಿದ್ದ ತಂದೆತಾಯಿಯರು ಬರೀ ಮೊಬೈಲ್ ಕೊಟ್ಟು ಅವರ ಜೀವನ ಹಾಳುಮಾಡುತ್ತಿದ್ದಾರೆ. ಇಂತಹ ವಿಚಾರಗಳನ್ನು ಪೋಷಕರು ಗಂಭೀರವಾಗಿ ಪರಿಗಣಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಗಳಲ್ಲಿ ಹೆಚ್ಚು ತೊಡಗುವಂತಹ ವಾತಾವರಣವನ್ನು ಪೋಷಕರು ಕಲ್ಪಿಸಬೇಕೆಂದು ಕಿವಿಮಾತು ಹೇಳಿದರು.

     ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ರೇಣುಕ ಹಾಗೂ ಬಸವಣ್ಣ ಅವರ ಪುತ್ತಳಿ ಹಾಗೂ ರಂಭಾಶ್ರೀಗಳು ಸೇರಿದಂತೆ ಹರಗುರುಚರಮೂರ್ತಿಗಳನ್ನು ಮೆರವಣಿಗೆ ನಡೆಸಿ ನಂತರ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಧಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

     ಎಡೆಯೂರು ಬಾಳೆಹೊನ್ನೂರು ಶಾಖಾ ಮಠದ ರೇನುಕಶಿವಾಚಾರ್ಯ ಸ್ವಾಮೀಜಿ, ಕಪ್ಪೂರು ಮಠದ ಯತೀಶವರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರಶಿವಾಚಾರ್ಯಸ್ವಾಮೀಜಿ, ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜೀ, ರಾಮೇನಹಳ್ಳಿ ಮಠದ ಶಿವಪಂಚಾಕ್ಷಿರಿ ಸ್ವಾಮೀಜಿ, ಹುಲಿಯೂರುದುರ್ಗ ಸಿದ್ದಗಂಗೆ ಮಠದ ಸಿದ್ದಲಿಂಗ ಶಿವಾನಂದ ಸ್ವಾಮಿಜೀ, ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಕುಣಿಗಲ್ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ, ಶಾಸಕ ಡಾ.ರಂಗನಾಥ್, ವಿರಶೈವ ಸಮಾಜದ ಅಧ್ಯಕ್ಷ ಕಿರಣ್‍ಬಾಬು, ಸಮಾಜದ ಮುಖಂಡರಾದ ಅಂಗಡಿ ಮದೇವಣ್ಣ, ವೈ.ವಿ.ಬಸವರಾಜು, ಸೋಮಶೇಖರ್, ಸುಂದರ ಕುಪ್ಪೆ ಪಾಪಣ್ಣ, ಕುಮಾರಸ್ವಾಮಿ, ಶಶಿಧರ್, ಎಸ್.ಆರ್ ಚಂದ್ರಶೇಖರಯ್ಯ, ಕಗ್ಗೆರೆ ದಿನೇಶ್ ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap