ಹರಪನಹಳ್ಳಿ
ಪಟ್ಟಣದ ಕಂದಾಯ ಇಲಾಖೆಯಲ್ಲಿ ಕಳೆದ 11 ತಿಂಗಳಲ್ಲಿ 6 ತಹಶೀಲ್ದಾರರು ಸರತಿಯಂತೆ ಬದಲಾಗುತ್ತಿದ್ದಾರೆ ಈ ರೀತಿ ಅಧಿಕಾರಿಗಳು ಪಿರೇಡೆ ನಡೆಸಿದರೆ ಸಾರ್ವಜನಿಕರ ಹಾಗೂ ಸರ್ಕಾರದ ಕೆಲಸಗಳು ಆಮೆಗತಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
22ರ ಮಾರ್ಚ್ 2018 ರಂದು ಶಿವಶಂಕರನಾಯ್ಕ್ ಅಧಿಕಾರ ಸ್ವೀಕಾರ ಮಾಡಿ 22/6/2018 ಕ್ಕೆ ವರ್ಗಾವಣೆಯಾದರು. ಗುರುಬಸವರಾಜ ಅವರು ಪ್ರಭಾರಿ ಅಧಿಕಾರ ಸ್ವೀಕಾರ. 23ರ ಆಗಷ್ಟ್ 2018ಕ್ಕೆ ಡಾ.ಮಧು ಅಧಿಕಾರ ಸ್ವೀಕಾರಿಸಿ 27/11/2018 ಕ್ಕೆ ವರ್ಗಾವಣೆಯಾಗುತ್ತಾರೆ.
ಮತ್ತೆ ಶಿವಶಂಕರನಾಯ್ಕ್ 27/11/2018 ರಿಂದ 12/12/2018ಕ್ಕೆ ಅಧಿಕಾರ ನಡೆಸುತ್ತಾರೆ. ರವಿ ಪ್ರಭಾರಿ ತಹಶೀಲ್ದಾರರಾಗಿ 9/1/218ರ ವರೆಗೆ ಅಧಿಕಾರ ಸ್ವೀಕರಿಸಿದ್ದು ಲೋಕಸಭಾ ಚುನಾವಣೆ ಪ್ರಯುಕ್ತ ಯಾವುದೇ ಗಳಿಗೆಯಲ್ಲಿ ವರ್ಗಾವಣೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ರೀತಿ ಅಧಿಕಾರಿಗಳು ವರ್ಗಾವಣೆ ಯಾದರೆ ಸಾವರ್ಜನಿಕರ ಕೆಲಸ ಕಾರ್ಯಗಳಿಗೆ ಯಾರು ಹೊಣೆ.
ರಾಜ್ಯ ಸರ್ಕಾರ ವರ್ಗಾವಣೆಯಲ್ಲೇ ಕಾಲ ಕಳೆಯುತ್ತಿದ್ದು ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ.
ತಾಲ್ಲೂಕಿನ ಜನತೆಗೆ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ನಂತರ 371 ಜೆ ಕಲಂ ಪ್ರಮಾಣ ಪತ್ರ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರತಿ ದಿನ ಅರ್ಜಿಗಳ ಮಹಾಪೂರ ಹರಿದು ಬರುತ್ತಿದೆ. ಇಲಾಖೆಯ ಮೇಲೆ ಅತೀ ಹೆಚ್ಚಿನ ಒತ್ತಡ ಬೀಳುತ್ತಿದೆ. ಇದರಿಂದ ಕಂದಾಯ ಇಲಾಖೆಗೆ ಇನ್ನೂ ಹೆಚ್ಚಿನ ಹೊರೆ ಬಿದ್ದಿದೆ.
ಇಲಾಖೆಯಲ್ಲಿ 24 ಖಾಲಿ ಹುದ್ದೆಗಳ ಸಂಖ್ಯೆಯೂ ಏರುತ್ತಿದೆ.24 ಖಾಲಿ ಹುದ್ದೆಗಳಲ್ಲಿ ಗ್ರೇಡ್ 2 ತಹಶೀಲ್ದಾರ ಹುದ್ದೆಗಳು 2 ಮಂಜೂರಾಗಿದ್ದು 2 ಖಾಲಿ ಇವೆ, 3 ಶಿರಸ್ತಾದದರಲ್ಲಿ ಮೂರು ಖಾಲಿ ಇವೆ, 7 ಏಫ್‍ಡಿಏ ಹುದ್ದೆಗಳಲ್ಲಿ 3 ಖಾಲಿ ಇವೆ, 11 ಎಸ್‍ಡಿಎ ಹುದ್ದೆಗಳಲ್ಲಿ 3 ಖಾಲಿ ಇವೆ, ಬೆರಳಚ್ಚುಗಾರರ 3 ಹುದ್ದೆಗಳಲ್ಲಿ ಮೂರು ಖಾಲಿ ಇವೆ, 45 ಗ್ರಾಮ ಲೆಕ್ಕಿಗರರಲ್ಲಿ 7 ಹುದ್ಧೆಗಳು ಖಾಲಿ ಇವೆ. ಅಲ್ಲದೇ ಪ್ರಿಂಟರ್ ಇಲ್ಲ, ಸ್ಕ್ಯಾನರ್ ಇಲ್ಲ ಹೀಗೆ ಇಲ್ಲಾಗಳಲ್ಲೇ ಇರುವ ಕಂದಾಯ ಇಲಾಖೆ ನೌಕರರು ಕೆಲಸ ಮಾಡಬೇಕಾಗಿದೆ.
ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ನೌಕರಿ ಪಡೆಯಲು 371 ಜೆ ಪ್ರಮಾಣ ಪತ್ರ ನೀಡಲು ವಿಳಂಬವಾಗುತ್ತಿದೆ. ಆಧಾರ ಕಾರ್ಡ್, ಪಹಣಿ, ಖಾತಾ ಬದಲಾವಣೆ, ನಿವಾಸಿ ದೃಡೀಕರಣ, ವಂಶಾವಳಿ, ಹೀಗೆ ಹತ್ತು ಹಲವಾರು ಪ್ರಮಾಣ ಪತ್ರಗಳು ಕಂದಾಯ ಇಲಾಖೆಯಿಂದ ಪಡೆಯಲು ಸಾರ್ವಜನಿಕರು ಹರಸಾಹಸ ಮಾಡುತ್ತಿದ್ದಾರೆ. ಇನ್ನಾದರೂ ಜನ ಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತುಕೊಂಡು ಅಧಿಕಾರಿಗಳ ವರ್ಗಾವಣೆಗೆ ಹಾಗೂ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
