ತಿಪಟೂರು
ತಾಲ್ಲೂಕಿನ ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸಭೆಯನ್ನು ರಾಷ್ಟ್ರೀಯ ಗ್ರಾಮೀಣಾ ಜೀವನೋಪಾಯ ಮತ್ತು ಗ್ರಾಮ ಪಂಚಾಯಿತಿ 14ನೇ ಹಣಕಾಸನ್ನು ಅಂಗವಿಕಲ ಫಲಾನುಭವಿಗಳಿಗೆ, ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ, ಕ್ರೀಡಾ ಸಾಮಗ್ರಿಗಳು ಮತ್ತು ಆರೋಗ್ಯ ಇಲಾಖೆಯಿಂದ ಆಯ್ದ ಗರ್ಭಿಣಿಯರಿಗೆ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಾರ್ಡ್ ಸಭೆಗಳ ಬಗ್ಗೆ ಜನರು ಸಭೆಗಳಿಗೆ ಬಂದು ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳು ಯಾವ ರೀತಿ ಸರ್ಕಾರದ ಹಣವನ್ನು ಖರ್ಚುಮಾಡುತ್ತಿದ್ದಾರೆ. ಅದು ಅರ್ಹಫಲಾನುಭವಿಗಳನ್ನು ಹೇಗೆ ಆಯ್ಕೆಮಾಡಿದ್ದಾರೆ ಅಥವಾ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ ಎಂಬುದನ್ನು ತಿಳಿದು ಪ್ರಶ್ನೆಮಾಡಿದಾಗ ಮಾತ್ರ ಗ್ರಾಮಸಭೆಗೆ ಮಹತ್ವ ಬರುತ್ತದೆ.
ಈರೀತಿಯ ಪ್ರಶ್ನೆಮಾಡುವ ಧೈರ್ಯಮಾಡಿದರೆ ಮಾತ್ರ ದೇಶವು ಉದ್ದಾರವಾಗುತ್ತದೆಂದು ಮತ್ತು ಗ್ರಾಮ ಸಭೆಯ ಉದ್ದೇಶವು ಈಡೇರುತ್ತದೆ. ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜು ಅರಸುರವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿರವರನ್ನು ನೆನೆಯುತ್ತಾ ಇವರು ಪ್ರಧಾನಿಯಾಗಿದ್ದಾಗ ಗ್ರಾಮೀಣ ಭಾಗದ ರೈತಾಪಿ ವರ್ಗದವರಿಗೆ ನೆರವಾಗಲೆಂದು ರಸ್ತೆಗಳನ್ನು ನಿರ್ಮಿಸಲು ಕೂಲಿಗಾಗಿ ಕಾಳು ಎಂಬ ಯೋಜನೆಯನ್ನು ಜಾರಿಗೆ ತಂದು ರಸ್ತೆ ನಿರ್ಮಾಣದ ಜೊತೆಗೆ ಸ್ಥಳೀಯರಿಗೆ ಕೆಲಸವನ್ನು ದೊರಕಿಸಿಕೊಟ್ಟಿದ್ದಾರೆಂದರು. ಸ್ತ್ರೀಶಕ್ತಿ ಸಂಘಟನೆಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂದು ಸ್ವಾವಲಂಬಿ ಯೋಜನೆ, ಬಡಹೆಣ್ಣು ಮಕ್ಕಳು ಜೀವನ ಉತ್ತಮರೀತಿಯಲ್ಲಿ ಮುಂದೆ ಸಂದರ್ಭದಲ್ಲಿ ಕೈಚಾಚಬಾರದು. ತಮ್ಮ ಜೀವನೋಪಾಯವನ್ನು ರೂಪಿಸಿಕೊಳ್ಳಲು ಎನ್.ಆರ್.ಎಲ್.ಎಂ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಚನೂರು ಗ್ರಾ.ಪಂ ಅಧ್ಯಕ್ಷರಾದ ಹೆಚ್.ಆರ್.ಗಿರೀಶ್ ವಹಿಸಿದ್ದು, ಸಿ.ಡಿ.ಪಿ.ಓ ಓಂಕಾರಪ್ಪ, ನೊಣವಿನಕೆರೆ ಸರ್ಕಾರಿ ವೈದ್ಯರು, ತಾ.ಪಂ ಎನ್.ಆರ್.ಎಲ್.ಎಂ ಸಂಯೋಜಕಿ ಚಂದ್ರಕಲಾ, ಗ್ರಾ.ಪಂ ಸದಸ್ಯರಾದ ದಿವಾಕರ್, ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಜೆ.ಕೆ.ಮಂಜುಳಾ, ಪಿ.ಡಿ.ಓ ರಮೇಶ್ ಮುಂತಾದವರಿದ್ದರು.